Friday, March 13, 2026
Flats for sale
Homeರಾಜ್ಯಮಾಗಡಿ : ಸೌಚಾಲಯ ಸ್ವಚ್ಛಗೊಳಿಸಲು ಹೇಳಿದ ಮೇಸ್ಟ್ರು ,ತಲೆ ಸುತ್ತು ಬಿದ್ದ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು.

ಮಾಗಡಿ : ಸೌಚಾಲಯ ಸ್ವಚ್ಛಗೊಳಿಸಲು ಹೇಳಿದ ಮೇಸ್ಟ್ರು ,ತಲೆ ಸುತ್ತು ಬಿದ್ದ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು.

ಮಾಗಡಿ : ಶಾಲೆಯ ಶೌಚಾಲಯ ಸ್ವಚ್ಚತೆಗೊಳಿಸುವ ವೇಳೆ ವಿದ್ಯಾರ್ಥಿನಿ ತಲೆ ಸುತ್ತು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ. ತಾಲೂಕಿನ ತೂಬಿನಕೆರೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕಹನುಮಯ್ಯ ಎಂಬುವರ ಮಗಳು ಹೇಮಲತಾ 3 ನೇ ತರಗತಿ ವಿದ್ಯಾಬ್ಯಾಸ ಮಾಡುತ್ತಿದ್ದು ಅ. 6 ಮಧ್ಯಾಹ್ನ 3-30 ರಲ್ಲಿ ಮುಖ್ಯ ಶಿಕ್ಷಕ ಸಿದ್ದಲಿಂಗಯ್ಯ, ಶಿಕ್ಷಕ ಸಿದ್ದರಾಜು ಎಂಬುವರು ಶಾಲೆಯ ಶೌಚಾಲಯ ಸ್ವಚ್ಚಗೊಳಿಸಲು ಆಸಿಡ್ ಮತ್ತು ಬೀಚೀಂಗ್ ಪೌಡರು ಕೊಟ್ಟು ಕಳುಹಿಸಿದ್ದು ವಿದ್ಯಾರ್ಥಿ ಹೇಮಲತಾ ಶೌಚಾಲಯದ ಸ್ವಚ್ಚತೆಗೊಳಿಸಿದ ನಂತರ ಮನೆಗೆ ತೆರಳಿದ ವೇಳೆ ವಿದ್ಯಾರ್ಥಿ ತಲೆ ಸುತ್ತಿ ಬಿದ್ದ ವೇಳೆ ಕೂಡಲೇ ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ
ದಾಖಲಿಸಲಾಗಿದೆ.

ಘಟನೆ ಬಗ್ಗೆ ಶಿಕ್ಷಕರಿಗೆ ಕರೆ ಮಾಡಿದರೆ ಇಬ್ಬರು ಕರೆ ಸ್ವೀಕರಿಸುತ್ತಿಲ್ಲ ಮಾನವಿಯತೆಯಿಂದಾದರೂ ಶಿಕ್ಷಕರು ಆಸ್ಪತ್ರೆಗೆ ತೆರಳಿ ನನ್ನ ಮಗಳ ಆರೋಗ್ಯ ವಿಚಾರಿಸದೆ ನಿರ್ಲಕ್ಷಿಸುತ್ತಿರುವುದು ಸರಿಯಲ್ಲ ಎಂದು ವಿದ್ಯಾರ್ಥಿನಿ ತಂದೆ ಚಿಕ್ಕಹನುಮಯ್ಯ ಆರೋಪಿಸಿದ್ದಾರೆ.

ಗ್ರಾ.ಪಂ. ಮಾಜಿ ಅಧ್ಯಕ್ಷ ಬಸವರಾಜು ಮಾತನಾಡಿ, ವಿದ್ಯಾರ್ಥಿ ಶಾಲೆಯಲ್ಲಿಯೆ ತಲೆ ಸುತ್ತಿ ಬಿದ್ದರು ಶಿಕ್ಷಕರು ಆಸ್ಪತ್ರೆಗೆ ಕರೆದೋಯ್ಯದೆ ಇರಯುವುದು ಬೇಸರದ ಸಂಗತಿ, ಜವಬ್ದಾರಿಯುತ ಶಿಕ್ಷಕರು ಚಿಕ್ಕಮಕ್ಕಳಿಂದ ಶೌಚಾಲಯವನ್ನು ಸ್ವಚ್ಚಗೊಳಿಸುವುದು ಸರಿಯಲ್ಲ, ಶಾಲೆಯ ಶೌಚಾಲಯ ಸ್ವಚ್ಚತೆ ಮತ್ತು ನಿರ್ವಹಣೆಗೆ ಸರಕಾರ ಸಾಕಷ್ಟು ಅನುದಾನ ನೀಡುತ್ತದೆ ಇದನ್ನು ಬಳಸಿಕೊಂಡು ಸ್ವಚ್ಚತೆಮಾಡಿಸ ಬೇಕಾದ ಶಿಕ್ಷಕರು ಮಕ್ಕಳಿಂದ ಸ್ವಚ್ಚಗೊಳಿಸುವುದು ಎಷ್ಟು ಸರಿ. ಶಾಲೆಯಸಮಸ್ಯೆ ಬಗ್ಗೆ ಶಿಕ್ಷಕರಾದ ಸಿದ್ದಲಿಂಗಯ್ಯ,
ಸಿದ್ದರಾಜು ಎಂಬುವರು ಪ್ರಶ್ನಿಸಿದರೆ ದೌರ್ಜನ್ಯವೆಸಗುತ್ತಾರೆ ಈ ಶಿಕ್ಷಕರ ವಿರುದ್ದ ಶಿಕ್ಷಣ ಇಲಾಖೆ ಶಿಸ್ತು ಕ್ರಮಕೈಗೊಳ್ಳದೆ ನಿರ್ಲಕ್ಷಿಸಿದರೆ ಶಿಕ್ಷಣ ಇಲಾಖೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular