Saturday, July 25, 2026
Homeಕ್ರೈಂಬೆಂಗಳೂರು ; ವಾಟ್ಸಾಪ್, ಟೆಲಿಗ್ರಾಂ ಆಪ್ ಮೂಲಕ ಅಮಾಯಕರಿಗೆ ಉಂಡೆನಾಮ ಹಾಕುತಿದ್ದ ಆರೋಪಿಗಳ ಬಂಧನ.

ಬೆಂಗಳೂರು ; ವಾಟ್ಸಾಪ್, ಟೆಲಿಗ್ರಾಂ ಆಪ್ ಮೂಲಕ ಅಮಾಯಕರಿಗೆ ಉಂಡೆನಾಮ ಹಾಕುತಿದ್ದ ಆರೋಪಿಗಳ ಬಂಧನ.

ಬೆಂಗಳೂರು ; ರಾಜಧಾನಿಯಲ್ಲಿ ಮತ್ತೊಂದು ಸೈಬರ್ ಅಪರಾಧದ ಭಾರೀ ವಂಚನೆ ಜಾಲ ಬೇಟೆಯಾಡಿರುವ ಬೆಂಗಳೂರು ನಗರ ಪೊಲೀಸರು 84 ಬ್ಯಾಂಕ್ ಅಕೌಂಟ್ ನಲ್ಲಿ 854 ಕೋಟಿ ವಹಿವಾಟು ನಡೆದು ದೇಶಾದ್ಯಂತ 5013 ವಂಚನೆ ಪ್ರಕರಣಗಳು ದಾಖಲಾಗಿರುವುದನ್ನು ಬಯಲಿಗೆಳೆದಿದ್ದಾರೆ.

ಬ್ಯಾಂಕ್ ಖಾತೆ ತೆರೆದು ಸಾಮಾಜಿಕ ಜಾಲತಾಣ ವಾಟ್ಸಾಪ್ ಟೆಲಿಗ್ರಾಮ್ ಆಪ್‌ಗಳ ಮೂಲಕ ಅಮಾಯಕರನ್ನು ಸಂಪರ್ಕಿಸಿ ಕಡಿಮೆ ಹಣ ಹೂಡಿಕೆಗೆ ಲಕ್ಷಾಂತರ ರೂ ಲಾಭ ನೀಡುವುದಾಗಿ ಕೊಡುವುದಾಗಿ ಪಂಗನಾಮ ಹಾಕಿ ಕೋಟ್ಯಾಂತರ ರೂಗಳನ್ನು ಜಾಲದಿಂದ ವಂಚನೆ ನಡೆಸಲಾಗಿದೆ ಎಂದು ನಗರ ಪೊಲೀಸ್ಆ ಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿದೇಶದಲ್ಲಿ ಇದ್ದುಕೊಂಡು ಬೆಂಗಳೂರಿನಿಂದ ಅಕೌಂಟ್ ಗಳನ್ನು ಮ್ಯಾನೇಜ್ ಮಾಡುತ್ತಿದ್ದ ಜಾಲಕ್ಕೆ ಸಹಕಾರ ಮಾಡುತ್ತಿದ್ದ ಬೆಂಗಳೂರಿನ ಗ್ಯಾಂಗ್ ನ ಮನೋಜ್ ಅಲಿಯಾಸ್ಜಾಕ್ , ಫಣೀಂದ್ರ , ವಸಂತ್, ಶ್ರೀನಿವಾಸ, ಚಕ್ರಾದರ್ ಅಲಿಯಾಸ್ಚ ಕ್ರಿ,ಸೋಮಶೇಖರ್ ಅಲಿಯಾಸ್ಅಂ ಕಲ್ ಬಂಧಿತ ಅರೋಪಿಗಳು ಎಂದು ಹೇಳಿದರು.

ವಿದ್ಯಾರಣ್ಯಪುರ, ಯಲಹಂಕ, ಭಾಗದಲ್ಲಿ ವಾಸವಾಗಿದ್ದ ಬಂಧಿತ ಆರೋಪಿಗಳು ವಿದೇಶದಿಂದ ಬರುವ ಆದೇಶದಂತೆ ಬ್ಯಾಂಕ್ ಅಕೌAಟ್’ಗಳನ್ನು ಮ್ಯಾನೇಜ್ ಮಾಡುತ್ತಿರುವುದು ಪತ್ತೆಯಾಗಿದ್ದು, ಅರೋಪಿಗಳಿಂದ ಕೃತ್ಯಕ್ಕೆ ಬಳಸಿದ ಪರಿಕರಗಳು ಹಾಗೂ ಸುಮಾರು ೫ ಕೋಟಿ ರೂಗಳನ್ನು ಜಪ್ತಿ ಮಾಡಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular