Wednesday, October 22, 2025
Flats for sale
Homeವಿದೇಶಚೆನ್ನೈ : ಜಗತ್ತು ಕಂಡಶ್ರೇಷ್ಠ ಕೃಷಿ ವಿಜ್ಞಾನಿ ಸ್ವಾಮಿನಾಥನ್ ನಿಧನ.

ಚೆನ್ನೈ : ಜಗತ್ತು ಕಂಡಶ್ರೇಷ್ಠ ಕೃಷಿ ವಿಜ್ಞಾನಿ ಸ್ವಾಮಿನಾಥನ್ ನಿಧನ.

ಚೆನ್ನೈ : ಜಗತ್ತು ಕಂಡಶ್ರೇಷ್ಠ ಕೃಷಿ ವಿಜ್ಞಾನಿಯಾಗಿ ಪ್ರಖ್ಯಾತಿ ಪಡೆದ ಡಾ. ಮೊಂಕೊAಬ ಸಾAಬಶಿವನ್ ಸ್ವಾಮಿನಾಥನ್ ಅವರು ಚೆನ್ನೈನಲ್ಲಿಂದು ನಿಧರಾಗಿದ್ದಾರೆ.

ಅವರಿಗೆ ೯೮ ವರ್ಷ ವಯಸ್ಸಾಗಿತ್ತು.ರೈತರ ಆದಾಯ ದ್ವಿಗುಣ,ಬೇಸಾಯದತ್ತ ಯುವಕರನ್ನುಸೆಳೆಯುವುದು, ಶೂನ್ಯ ಬಂಡವಾಳ ಕೃಷಿ, ಭವಿಷ್ಯದ ಬೇಸಾಯದ ಪದ್ಧತಿಅಳವಡಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಸ್ವಾಮಿನಾಥನ್ ಅವರು ದೇಶಾದ್ಯಂತ ಗಮನ ಸೆಳೆದಿದ್ದರು.

ಎಂ.ಎಸ್. ಸ್ವಾಮಿನಾಥನ್ ಅವರ ಪತ್ನಿ ಮೀನಾ ಸ್ವಾಮಿನಾಥನ್ ಅವರು ಕಳೆದ ವರ್ಷ ನಿಧನರಾಗಿದ್ದರು. ಸ್ವಾಮಿನಾಥನ್ ಅವರು ಮೂವರು ಪುತ್ರಿಯರಾದ ಸೌಮ್ಯ ಸ್ವಾಮಿನಾಥನ್,ಮಥುರಾ ಸ್ವಾಮಿನಾಥನ್ ಮತ್ತುನಿತ್ಯ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ.

೧೯೨೫ರ ಆಗಸ್ಟ್ ೭ ರಂದು ಕುAಭಕೋಣA ಜಿಲ್ಲೆಯಲ್ಲಿ ಜನಿಸಿದ ಸ್ವಾಮಿನಾಥನ್ ಅವರು ತಮ್ಮ ಸ್ವಂತ ಊರಿನಲ್ಲಿ ಶಿಕ್ಷಣಪೂರ್ಣಗೊಳಿಸಿದ ಬಳಿಕ ವೈದ್ಯರಾಗಲು ಬಯಸಿದ್ದರು. ಆದರೆ ೧೯೪೩ ರಲ್ಲಿಬಂಗಾಳದಲ್ಲಿ ಕ್ಷಾಮ ತಲೆ ದೋರಿಸ ಹಿನ್ನೆಲೆಯಲ್ಲಿ ಅವರ ಜೀವನದ ಗುರಿ ಬದಲಿಸಿತ್ತು. ಸುಮಾರು ೩೦ ಲಕ್ಷ ಜನ ಹಸಿವಿನಿಂದ ಸಾವನ್ನಪ್ಪಿದ್ದನ್ನು ಕಂಡು ಕೃಷಿ ಸಂಶೋಧನೆಯಲ್ಲಿ ತೊಡಗಲು ತಮ್ಮ ಹಾದಿಯನ್ನು ತಿರುಗಿಸಿದರು. ಕೇರಳದ ತಿರುವನಂತಪುರAನ ಮಹಾರಾಜ ಕಾಲೇಜಿನಲ್ಲಿ ಪ್ರಾಣಿಶಾಸ್ತçದಲ್ಲಿ ಪದವಿ ಪಡೆದರು ಮತ್ತು ಮದ್ರಾಸ್ ಕೃಷಿ ಕಾಲೇಜಿನಲ್ಲಿ ಕೃಷಿ ವಿಜ್ಞಾನವನ್ನು ಪೂರ್ಣಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular