Wednesday, October 22, 2025
Flats for sale
Homeಕ್ರೀಡೆಹೈದರಾಬಾದ್ : ಪಾಕ್ ಆಟಗಾರರಿಗೆ ಕೇಸರಿ ಶಾಲು ಹೊದಿಸಿ ಅದ್ದೂರಿ ಸ್ವಾಗತ.

ಹೈದರಾಬಾದ್ : ಪಾಕ್ ಆಟಗಾರರಿಗೆ ಕೇಸರಿ ಶಾಲು ಹೊದಿಸಿ ಅದ್ದೂರಿ ಸ್ವಾಗತ.

ಹೈದರಾಬಾದ್, ಸೆ. ೨೮- ಮುಂದಿನ ತಿಂಗಳು ೫ ರಿಂದ ಆರAಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ೨೦೨೩ ಪಂದ್ಯಾವಳಿಯಲ್ಲಿ ಭಾಗಿಯಾಗಲು ಬಾಬರ್ ಅಝಮ್ನಾ ಯಕತ್ವದ ಪಾಕಿಸ್ತಾನ ಕ್ರಿಕೆಟ್ತಂ ಡ ಹೈದರಾಬಾದ್‌ಗೆ ಅಗಮಿಸಿದ್ದು ವಿಮಾನ ನಿಲ್ದಾಣದಲ್ಲಿ ಕೇಸರಿ ಶಾಲು ಹೊದಿಸಿ ಅದ್ದೂರಿ ಸ್ವಾಗತ ಕೋರಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡ ೭ ವರ್ಷಗಳ ನಂತರ ಭಾರತಕ್ಕೆ ಮೊದಲ ಭೇಟಿಯಾಗಿದೆ. ಪಾಕಿಸ್ತಾನ ತಂಡ ಅಕ್ಟೋಬರ್ ೬ ರಂದು ಹೈದರಾಬಾದ್‌ನಲ್ಲಿ ನೆರ‍್ಲೆಂಡ್ಸ್ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ.

ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಕದನ ಅಕ್ಟೋಬರ್ ೧೪ ರಂದು ಅಹ್ಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಅಕ್ಟೋಬರ್ ೧೦ ರಂದು ಶ್ರೀಲAಕಾ ವಿರುದ್ಧ ಬಾಬರ್ ಪಡೆ ಹೈದರಾಬಾದ್‌ನಲ್ಲಿ ಮತ್ತೊಂದು ಪAದ್ಯವನ್ನು ಆಡಲಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಜಗಳವಾಡಿದ್ದ ೨೪ ವರ್ಷದ ನವೀನ್ ಉಲ್ಹ ಖ್ ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ೧೦ ತಂಡಗಳಿಗೆ ಹೆಚ್ಚಿನ ಭದ್ರತೆ ಒದಗಿಸುವುದಾಗಿ ಬಿಸಿಸಿಐ ಭರವಸೆ ನೀಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ ಮುಖ್ಯಸ್ಥ ಝಕಾ ಅಶ್ರಫ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಮ್ಮ ತಂಡಕ್ಕೆ ಬೇರೆ ಏನನ್ನೂ ನಿರೀಕ್ಷಿಸುವುದಿಲ್ಲ. ತಂಡ ಭಾರತದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಭಾವಿಸುತ್ತೇನೆ,” ಎಂದು ಹೇಳಿದ್ದಾರೆ.

ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಕೊನೆಯ ಬಾರಿಗೆ ಏಷ್ಯಾಕಪ್‌ನಲ್ಲಿ ಕಾಣಿಸಿಕೊಂಡಿತ್ತು. ಕಾಂಟಿನೆAಟಲ್ ಕಪ್‌ನಲ್ಲಿ ಬಾಬರ್ ಅಝಮ್ ನೇತೃತ್ವದ ತಂಡವು ಸೆಮಿಫೈನಲ್ ತಲುಪಲು ವಿಫಲವಾಗಿತ್ತು. ಇದೀಗ
ಏಕದಿನ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರದ್ಧ ಮೊದಲ ಪಂದ್ಯ ಆಡುವ ಮೊದಲು, ಪಾಕಿಸ್ತಾನ ಎರಡು ಅಭ್ಯಾಸ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular