ಪುತ್ತೂರು : ಉಪ್ಪಿನಂಗಡಿಯ ಮೇಸ್ತ್ರಿಗೆ ಕೇರಳದ ಅದೃಷ್ಟ ಬಂಪರ್ ಲಾಟರಿ ಒಲಿದಿದೆ ,ಉಪ್ಪಿನಂಗಡಿಯ ಇಳಂತಿಲ ನಿವಾಸಿ ಚಂದ್ರಯ್ಯ ಮೇಸ್ತ್ರಿ 50 ಲಕ್ಷ ರವರು ಬಹುಮಾನ ಗೆದ್ದಿದ್ದಾರೆ.
ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ಸಮಯದಲ್ಲಿ ಚಂದ್ರಯ್ಯ ರವರು ಲಾಟರಿ ಟಿಕೆಟ್ ನ್ನು ಖರೀದಿಸಿದ್ದರು.ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಟಿಕೆಟ್ ಖರೀದಿಸಿದ್ದು ಸೆ.20ರಂದು ಓಣಂ ಲಾಟರಿ ಡ್ರಾ ಬಂಪರ್ ಬಹುಮಾನ ಗೆದ್ದಿದ್ದಾರೆ.
500 ರೂಪಾಯಿ ಟಿಕೆಟ್ ಖರೀದಿಸಿದ್ದ ಚಂದ್ರಯ್ಯಗೆ ಬಂಪರ್ 50 ಲಕ್ಷ ಬಹುಮಾನ ಹೊಡೆದಿದ್ದಾರೆ,ಈ ಹಿಂದೆ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಉಪ್ಪಿನಂಗಡಿಯ ಕೆಂಪಿಮಜಲು ನಿವಾಸಿಗೆ 80 ಲಕ್ಷ ಬಹುಮಾನ ಬಂದಿತ್ತು ಆನಂದ ಟೈಲರ್ ಎಂಬವರು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಈ ಹಿಂದೆ ಬಹುಮಾನ ಗೆದ್ದಿದ್ದರು.


