ಹಾಂಗ್‌ಝೌ : ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತದ ಮಹಿಳಾ ಕ್ರಿಕೆಟ್ ತಂಡ, ಏಷ್ಯನ್ಗೇ ಮ್ಸ್ನಲ್ಲಿ ಬಂಗಾರದ ಪದಕ ಬಾಚಿಕೊಂಡು ಹಿರಿಮೆ ಮೆರೆದಿದೆ. ಸೋಮವಾರ ಪಿಂಗ್‌ಫೆAಗ್ ಕ್ಯಾಂಪಸ್ ಕ್ರಿಕೆಟ್ಫೀ ಲ್ಡ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ, ಶ್ರೀಲಂಕಾ ತಂಡದ ವಿರುದ್ಧ ೧೯ ರನ್ ಜಯ ಸಾಧಿಸಿತು. ಸೋಲು ಅನುಭವಿಸಿದ ಶ್ರೀಲಂಕಾ ವನಿತೆಯರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಜಯ ಗಳಿಸಲು ೨೦ ಓವರ್‌ಗಳಲ್ಲಿ ೧೧೭ ರನ್ಸೇ ರಿಸುವ ಗುರಿ ಪಡೆದ ಶ್ರೀಲಂಕಾ, ನಿಗದಿತ ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ೯೭ ರನ್ ಮಾತ್ರ ಸೇರಿಸಿ ಸೋಲಿನ ಕಹಿ ಅನುಭವಿಸಿತು.
೨೦ ಕ್ಕೆ ಎರಡು, ದೇವಿಕಾ ವೈದ್ಯ ೧೫ ಕ್ಕೆ ಒಂದು, ಪೂಜಾ ವಸ್ರö್ತಕಾರ್ ೨೦ ಕ್ಕೆ ಒಂದು ಹಾಗೂ ದೀಪ್ತಿ ಶರ್ಮಾ ೨೫ ಕ್ಕೆ ಒಂದು ವಿಕೆಟ್ ಉರುಳಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ ೨೦ ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ೧೧೬ ರನ್ ಸೇರಿಸಿತು. ಒಂದು ಹಂತದಲ್ಲಿ ೧೬ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೧೦೦ ರನ್ ಮಾಡಿದ್ದ ಭಾರತ, ಮುಂದೆ ಉಳಿದ ನಾಲ್ಕು ಓವರ್‌ಗಳಲ್ಲಿ ಕೇವಲ ೧೬ ರನ್ಗ ಳಿಸಿ ಐದು ವಿಕೆಟ್ ಕಳೆದುಕೊಂಡಿತು.
ಭಾರತದ ಪರ ಸ್ಮೃತಿ ಮಂಧಾನ ೪೬ (೪೫ ಎಸೆತ, ೪ ಬೌಂಡರಿ, ೧ ಸಿಕ್ಸರ್) ಹಾಗೂ ಜೆಮಿಮಾ ರೋಡ್ರಿಗಸ್ ೪೨ (೪೦ ಎಸೆತ, ೫ ಬೌಂಡರಿ) ರನ್ಮಾ ಡಿದರೆ, ಉಳಿದವರು ಎರಡಂಕ್ಕಿ ಮೊತ್ತ ಕೂಡ ಕಾಣಲಿಲ್ಲ.ಶ್ರೀಲಂಕಾ ಪರ ಉದೇಶಿಕಾ ಪ್ರಬೋಧನಿ ೧೬ ಕ್ಕೆ ಎರಡು, ಇನೋಕಾ ರಣವೀರ ೨೧ ಕ್ಕೆ ಎರಡು ಹಾಗೂ ನಿ, ಸುಗಂದಿಕಾ ಕುಮಾರಿ ೩೦ ಕ್ಕೆ ಎರಡು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರು.
ಭಾರತ ಮಹಿಳಾ ತಂಡ: ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೧೬ (Àರ ಸ್ಮೃತಿ ಮಂಧಾನ ೪೬, ಜೆಮಿಮಾ ರೋಡ್ರಿಗಸ್ ೪೨, ಉದೇಶಿಕಾ ಪ್ರಬೋಧನಿ ೧೬ ಕ್ಕೆ ೨, ಇನೋಕಾ ರಣವೀರ ೨೧ ಕ್ಕೆ ೨, ಸುಗಂದಿಕಾ ಕುಮಾರಿ ೩೦ ಕ್ಕೆ ೨). ಶ್ರೀಲಂಕಾ ಮಹಿಳಾ ತಂಡ: ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ೯೭ (ಹಾಸಿನಿ ಪೆರೇರಾ ೨೫, ನೀಲಾಕ್ಷಿ ಡಿ ಸಿಲ್ವಾ ೨೩, ಓಷದಿ ರಣಸಿಂಗೆ ೧೯, ಚಾಮರಿ ಅಟ್ಟಾಪಟ್ಟು ೧೨, ಟಿಟಾಸ್ ಸಾಧು ೬ ಕ್ಕೆ ೩, ರಾಜೇಶ್ವರಿ ಗಾಯಕ್ವಾಡ್ ೨೦ ಕ್ಕೆ ೨, ದೇವಿಕಾ ವೈದ್ಯ ೧೫ ಕ್ಕೆ ೧, ಪೂಜಾ ವಸ್ರö್ತಕಾರ್ ೨೦ ಕ್ಕೆ ೧, ದೀಪ್ತಿ ಶರ್ಮಾ ೨೫ ಕ್ಕೆ ೧).