ಕೋಲಾರ: ನಗರದ ಚೆನ್ನಯ್ಯ ರಂಗಮAದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮವು ಕೋಲಾರ ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಮತ್ತು ಬಂಗಾರಪೇಟೆ ಶಾಸಕ ಎಸ್. ಎನ್.ನಾರಾಯಣಸ್ವಾಮಿ ನಡುವೆ ಹೊಡೆದಾಟದ ವೇದಿಕೆಯಾಗಿ ಪರಿವರ್ತನೆಯಾಯಿತು.
ಜನತಾದರ್ಶನದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಸದ ಮುನಿಸ್ವಾಮಿ ತಡವಾಗಿ ಆಗಮಿಸಿದರು. ತಮ್ಮ ಭಾಷಣದ ವೇಳೆ ಇತ್ತೀಚೆಗೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಪ್ರಸ್ತಾಪಿಸಿದರು.
ರೈತರು ೧೦-೨೦-೩೦ ಗುಂಟೆ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ಒತ್ತುವರಿ ನೆಪದಲ್ಲಿ ನಾಶ ಪಡಿಸಲಾಗುತ್ತಿದೆ. ಆದರೆ ಸಚಿವರ ಅಕ್ಕಪಕ್ಕದಲ್ಲೇ ಭೂಗಳ್ಳರು ಇದ್ದಾರೆ. ಕೆರೆ, ಗೋಮಾಳ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡಿದ್ದಾರೆ. ಮೊದಲು ರಾಜಕಾರಣಿಗಳ ಒತ್ತುವರಿ ತೆರವು ಮಾಡಿದರೆ ಮಾತ್ರ ನಿಮ್ಮನ್ನು ಹೀರೋ ಎಂದು ಪರಿಗಣಿಸಲು ಸಾಧ್ಯ ಎಂದು ಮುನಿಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ರನ್ನು ಉದ್ದೇಶಿಸಿ ನುಡಿದರು.
ಇದು ಸಚಿವರ ಪಕ್ಕದಲ್ಲೇ ಕುಳಿತಿದ್ದ ಶಾಸಕ ಎಸ್.ಎನ್‌ರನ್ನು ಕೆರಳಿಸಿತು. ದಿಢೀರನೇ ಎದ್ದುನಿಂತು `ನಾನಲ್ಲ, ನಿಮ್ಮಪ್ಪ ಭೂಗಳ್ಳ, ಇತ್ಯಾದಿಯಾಗಿ ತೆಗಳಿದರು. ಇದಕ್ಕೆ ಪ್ರತಿಯಾಗಿ ಮುನಿಸ್ವಾಮಿ ಸಹ ಏಕವಚನದಲ್ಲೇ ಶಾಸಕ ಎಸ್‌ಎನ್‌ರನ್ನು ನಿಂದಿಸುತ್ತ ಏರಿ ಬಂದರು, ಪರಿಸ್ಥಿತಿ ಬಿಗಡಾಯಿಸುವುದನ್ನು ಗಮನಿಸಿದ ಜಿಲ್ಲಾ ರಕ್ಷಣಾಧಿಕಾರಿ ಮುನಿಸ್ವಾಮಿರನ್ನು ಬಿಗಿದಪ್ಪಿ ವೇದಿಕೆಯಿಂದ ಕೆಳಗೆ ಎಳೆದುಕೊಂಡು ಹೋದರು. ತಮ್ಮನ್ನು ರಂಗಮAದಿರದಿAದ ಹೊರಗೆ ಎಳೆದೊಯ್ಯುವುದಕ್ಕೆ ಮುನಿಸ್ವಾಮಿ ವಿರೋಧಿಸಿ, ಎಸ್ಪಿ ನಾರಾಯಣ್ವಿ ರುದ್ಧ ಪ್ರತಿಭಟಿಸಿದರು.
ಅವರೂ ಒಬ್ಬ ಜನಪ್ರತಿನಿಧಿ, ಶಾಂತಿಯುತವಾಗಿ ಕಾರ್ಯಕ್ರಮ ನಡೆಸಲು ನೀವು ಅಡ್ಡಿಯಾಗಿದ್ದೀರಿ. ನಿಮ್ಮನ್ನು ಯಾವುದೇ ಕಾರಣಕ್ಕೆ ಒಳಗೆ ಬಿಡುವುದಿಲ್ಲ ಎಂದು ಎಸ್ಪಿ ನಿರಾಕರಿಸಿದರು. ೧೦-೧೫ ನಿಮಿಷ ವಾದ ವಿವಾದದ ನಂತರ ಮತ್ತೆ ವೇದಿಕೆಗೆ ಬಂದ ಸಂಸದ ಮುನಿಸ್ವಾಮಿ ಸಚಿವ ಬೈರತಿ ಪಕ್ಕದಲ್ಲೇ ಕುಳಿತು ನಾನೇನು ಶಾಸಕರ ಹೆಸರು ಹೇಳಲಿಲ್ಲ, ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಯಾಕೆ ಮಟ್ಟಿಕೊಳ್ಳಬೇಕು ಎಂದು ಪ್ರಶ್ನಿಸಿದರು.