Friday, March 13, 2026
Flats for sale
Homeಜಿಲ್ಲೆಮಂಗಳೂರು : ಮಂಗಳೂರಿನ ಪೊಲೀಸ್ ಇಲಾಖೆಯ ಸ್ಪೆಷಲ್ ಸೀಕ್ರೆಟ್ ಏಜೆಂಟ್ ಚಂದ್ರಣ್ಣ ಇನ್ನಿಲ್ಲ.

ಮಂಗಳೂರು : ಮಂಗಳೂರಿನ ಪೊಲೀಸ್ ಇಲಾಖೆಯ ಸ್ಪೆಷಲ್ ಸೀಕ್ರೆಟ್ ಏಜೆಂಟ್ ಚಂದ್ರಣ್ಣ ಇನ್ನಿಲ್ಲ.

ಮಂಗಳೂರು : ಅಪರಾಧ ಇಲಾಖೆಯಲ್ಲಿ ಪರಿಣಿತ ಪಡೆದಿರುವ ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕಳೆದ 15 ವರ್ಷಗಳಿಂದ ಸ್ಪೆಷಲ್ ಏಜೆಂಟ್ ಆಗಿ ಕೆಲಸ ಮಾಡುತಿದ್ದ ಹೆಡ್ ಕಾನ್ಸ್ಟೇಬಲ್ ಚಂದ್ರ ಅಡೂರ್ ಕೆಲ ದಿನಗಳಿಂದ ಅಸೌಖ್ಯದಲ್ಲಿದ್ದು ಇಂದು ಇಹಲೋಕ ತ್ಯಜಿಸಿದ್ದಾರೆ .

1996 ರಲ್ಲಿ ಪೊಲೀಸ್ ಇಲಾಖೆ ಸೇರಿದ ಅವರು 27 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಕೇರಳದ ಕಾಸರಗೋಡಿನ ಅಡೂರಿನವರು ,ಮೊದಲಬಾರಿಗೆ ಪಣಂಬೂರು ಠಾಣೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಆರಂಭಿಸಿದ ಅವರು ಉಳ್ಳಾಲ ,ಪಾಂಡೇಶ್ವರ ,ಕಂಕನಾಡಿ ಸೇರಿ ಹಲವೂ ಠಾಣೆಯಲ್ಲಿ ಸಲ್ಲಿಸಿದ್ದಾರೆ.ಇನ್ಸ್ಪೆಕ್ಟರ್ ಜಯಂತ್ ಶೆಟ್ಟಿ ಯವರ ಬಲಗೈ ಬಂಟ ಆಗಿದ್ದ ಇವರು ಇಲಾಖೆಯ ಎಲ್ಲಾ ವಲಯದಲ್ಲೂ ಹಾಗೂ ಎಲ್ಲಾ ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು.

ಮೂರು ತಿಂಗಳಿಂದ ಅನಾರೋಗ್ಯ ಉಂಟಾದ ಕಾರಣ ಕಂಕನಾಡಿಯಾ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದರು ,ಲಿವರ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ೧೦ ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರು. ವಿಶ್ರಾಂತಿ ಪಡೆಯುತ್ತಿದ್ದ ಅವರಿಗೆ ಜ್ವರ ಕಾಣಿಸಿಕೊಂಡಿತ್ತು ,ಸರಿಯಾದ ಸಮಯಕ್ಕೆ ಐ.ಸಿ .ಯು ಸಿಗದ ಕಾರಣ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ .

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular