Wednesday, November 5, 2025
Flats for sale
Homeಜಿಲ್ಲೆಮಂಗಳೂರು : ವಿದೇಶದಲ್ಲಿದ್ದುಕೊಂಡು ಕದ್ರಿ ದೇವಸ್ಥಾನ ಸ್ಫೋಟಕ್ಕೆ ಉಗ್ರರ ಸಂಚು,ಎನ್‌ಐಎ ಅಧಿಕೃತ ಹೇಳಿಕೆ.

ಮಂಗಳೂರು : ವಿದೇಶದಲ್ಲಿದ್ದುಕೊಂಡು ಕದ್ರಿ ದೇವಸ್ಥಾನ ಸ್ಫೋಟಕ್ಕೆ ಉಗ್ರರ ಸಂಚು,ಎನ್‌ಐಎ ಅಧಿಕೃತ ಹೇಳಿಕೆ.

ಮಂಗಳೂರು : ಭಯಯೋತ್ಪಾದಕ ರಕ್ತ ಪಿಪಾಸು ಉಗ್ರರು ಮಂಗಳೂರಿನ ಪುರಾತನ ಸುಪ್ರಸಿದ್ದ ಕದ್ರಿ ಮಂಜುನಾಥ ದೇವಸ್ಥಾನವನ್ನು ಗುರಿಯಾಗಿಸಿ ಸ್ಫೋಟಕ್ಕೆ ಸಂಚು ನಡೆಸಿದ್ದರು ಎಂಬುದು ಇದೀಗ ಬಯಲಾಗಿದೆ. ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಿವಮೊಗ್ಗದ ಅರಾಫತ್ ಆಲಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಗುರುವಾರ ಕೀನ್ಯಾದಿಂದ ವಾಪಸ್ಸಾಗುತ್ತಿದ್ದ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿತ್ತು.

ಉಗ್ರರು ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನವನ್ನೇ ಗುರಿಯಾಗಿಸಿ ದಾಳಿ ನಡೆಸಲು ಸಿದ್ಧರಾಗಿದ್ದರು ಎಂಬುದನ್ನು ಎನ್‌ಐಎ ಅಧಿಕೃತಗೊಳಿಸಿದೆ. ಈ ಬಗ್ಗೆ ಎನ್‌ಐಎ ಹೊರಡಿಸಿದ ಹೇಳಿಕೆಯಲ್ಲಿ ಸ್ಫೋಟಕ್ಕೆ ಸಂಬAಧಿಸಿದ ಮಾಹಿತಿಗಳಿವೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಹಿಂದಿದ್ದ ಅರಾಫತ್ ಅಲಿ ಇದನ್ನೆಲ್ಲ ವಿದೇಶದಲ್ಲಿದ್ದುಕೊಂಡು ನಿಯAತ್ರಿಸುತ್ತಿದ್ದ ಎಂಬುದನ್ನು ಎನ್‌ಐಎ ಹೇಳಿಕೊಂಡಿದೆ. ಈತ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್ ಹಾಗೂ ಮಂಗಳೂರು ಗೋಡೆ ಬರಹದ ಮಾಸ್ಟರ್ ಮೈಂಡ್ ಆಗಿರುವುದನ್ನು ಎನ್‌ಐಎ ತಿಳಿಸಿದೆ.

ಕಳೆದ ವರ್ಷ ನ. ೧೯ರಂದು ಮಂಗಳೂರಿನ ನಾಗುರಿಯಲ್ಲಿ ಆಟೋದಲ್ಲಿ ತರುತ್ತಿದ್ದ ಕುಕ್ಕರ್ ಬಾಂಬ್ಟ ಸ್ಫೋಟಗೊಂಡಿತ್ತು. ಕದ್ರಿ ದೇವಸ್ಥಾನ ಸೇರಿ ಮಂಗಳೂರಿನ ಹಲವು ಜಾಗಗಳು ಶಾರಿಕ್ ನ ಟಾರ್ಗೆಟ್ ಎನ್ನಲಾಗಿತ್ತು. ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿದ್ದ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್, ಉಗ್ರ ಸಂಘಟನೆಯ ಗುರಿ ಇದ್ದುದು ಕದ್ರಿ ದೇವಸ್ಥಾನ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿತ್ತು.

ಕದ್ರಿ ದೇವಸ್ಥಾನ ನಮ್ಮ ಗುರಿಯಾಗಿತ್ತು ಎಂಬುದನ್ನು ಎನ್‌ಐಎ ವಶದಲ್ಲಿರುವ ಶಾರೀಕ್ ಕೂಡಾ ತನಿಖೆಯಲ್ಲಿ ಒಪ್ಪಿಕೊಂಡಿದ್ದ.

RELATED ARTICLES

LEAVE A REPLY

Please enter your comment!
Please enter your name here

Most Popular