Wednesday, November 5, 2025
Flats for sale
Homeರಾಜ್ಯಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ,ಮುಸ್ಲಿಂ ಸಂಘಟನೆ ಸಲ್ಲಿಸಿದ್ದ ಅರ್ಜಿ...

ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ,ಮುಸ್ಲಿಂ ಸಂಘಟನೆ ಸಲ್ಲಿಸಿದ್ದ ಅರ್ಜಿ ವಜಾ.

ಹುಬ್ಬಳ್ಳಿ : ಹುಬ್ಬಳ್ಳಿಯ ಕೋಮು ಸೂಕ್ಷ್ಮ ಈದ್ಗಾ ಮೈದಾನದಲ್ಲಿ ಹಿಂದೂ ಸಂಘಟನೆಗಳಿಗೆ ಗಣೇಶ ಉತ್ಸವ ಆಯೋಜಿಸಲು ಅವಕಾಶ ನೀಡುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (ಎಚ್‌ಡಿಎಂಸಿ) ನಿರ್ಣಯವನ್ನು ಪ್ರಶ್ನಿಸಿ ಅಂಜುಮನ್-ಇ-ಇಸ್ಲಾಂ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಶುಕ್ರವಾರ ವಜಾಗೊಳಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ನೀಡಿದ್ದ ಅನುಮತಿಯಂತೆ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಹಬ್ಬವನ್ನು ಆಯೋಜಿಸುವಂತೆ ಹಿಂದೂ ಸಂಘಟನೆಗಳ ಮನವಿಗೆ ಪಾಲಿಕೆ ಅನುಮೋದನೆ ನೀಡಿತ್ತು.ಈ ವರ್ಷವೂ ಗಣೇಶ ಉತ್ಸವ ನಡೆಸಲು ಪಾಲಿಕೆಯ ಸಾಮಾನ್ಯ ಸಭೆ ಬಹುಮತದೊಂದಿಗೆ ನಿರ್ಣಯ ಅಂಗೀಕರಿಸಿತ್ತು. ಆದರೆ, ನಿರ್ಣಯವನ್ನು ಮುಸ್ಲಿಂ ಸಂಘಟನೆ ಧಾರವಾಡ ಪೀಠದ ಮುಂದೆ ಪ್ರಶ್ನಿಸಿತ್ತು.

ಈ ಮಧ್ಯೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಪಡೆಗಳನ್ನು ಸಜ್ಜುಗೊಳಿಸುವ ಮೂಲಕ ಭದ್ರತಾ ಕ್ರಮಗಳನ್ನು ಹೆಚ್ಚಿಸಿದೆ. ಗಣೇಶ ಉತ್ಸವಕ್ಕೆ ಇತರ ಜಿಲ್ಲೆಗಳಿಂದ ಸುಮಾರು 1,500 ಪೊಲೀಸ್ ಅಧಿಕಾರಿಗಳು ಮತ್ತು 15 ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮತ್ತು 10 ಕ್ಷಿಪ್ರ ಕಾರ್ಯಪಡೆ ತಂಡಗಳನ್ನು ನಿಯೋಜಿಸಲಾಗುವುದು.

ಬೆಂಗಳೂರಿನ ಈದ್ಗಾ ಮೈದಾನದಂತೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಯಾವುದೇ ಹಕ್ಕು ವಿವಾದವಿಲ್ಲ ಎಂದು ತೀರ್ಪು ನೀಡಿದ ನಂತರ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಆಗಸ್ಟ್ 30 ರಂದು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಹಿಂದೂ ಸಂಘಟನೆಗೆ ಅನುಮತಿ ನೀಡಿತ್ತು. ಹುಬ್ಬಳ್ಳಿಯ ಈದ್ಗಾ ಮೈದಾನ ಎಚ್‌ಡಿಎಂಸಿಗೆ ಸೇರಿದ್ದು, ಆ ಜಾಗವನ್ನು ಅಂಜುಮನ್-ಇ-ಇಸ್ಲಾಂ ಸಂಸ್ಥೆಗೆ 999 ವರ್ಷಗಳ ಗುತ್ತಿಗೆ ನೀಡಲಾಗಿದೆ ಎಂದು ಧಾರವಾಡ ಪೀಠ ಗಮನಿಸಿದೆ. ಆದಾಗ್ಯೂ, ಭೂಮಿಯ ಬಳಕೆಯ ಮೇಲೆ ಎಚ್‌ಡಿಎಂಸಿ ಇನ್ನೂ ಹಕ್ಕುಗಳನ್ನು ಹೊಂದಿದೆ ಎಂದು ಅದು ಹೇಳಿದೆ.

ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ್ದರು. ಶಾಸಕ ಬೆಲ್ಲದ್​ಗೆ ನಿನ್ನೆ ಬೆಳಗ್ಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಭಾಗಿಯಾದ ಬಳಿಕ ಪ್ರತಿಭಟನೆ ಮತ್ತಷ್ಟು ಕಾವು ಪಡೆದಿತ್ತು. ಬಿಜೆಪಿ ಕಾರ್ಯಕರ್ತರ ಜೊತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಭಾಗಿಯಾಗಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ರು. ಇದೀಗ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ಫಲಸಿಕ್ಕಿದೆ.

ಪಾಲಿಕೆ ಹಾಕಿರುವ ಷರತ್ತುಗಳಿಗೆ ಹುಬ್ಬಳ್ಳಿಯಲ್ಲಿ ಗಜಾನನೋತ್ಸವ ಆಚರಣೆ ಸಮೀತಿ ಅಧ್ಯಕ್ಷ ಸಂಜೀವ್ ಬಡಸ್ಕರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆ, ಹುಬ್ಬಳ್ಳಿ ಗಣೇಶೋತ್ಸವ ಈ ಬಾರಿ ಕೂಡ ಗಮನ ಸೆಳೆದಿದೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚಣೆಗೆ ಪಾಲಿಕೆ ಅನುಮತಿ ನೀಡದೆ. ಈ ಕಾರಣ, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಶುರುವಾಗಿದೆ. ಇನ್ನು ಗಣೇಶೋತ್ಸವ ಹೇಗೆ ನಡೆಯುತ್ತೆ ಅಂತ ಕಾದು ನೋಡಬೇಕಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular