ಬೀದರ್ : ಜಮೀನಿನ ಮುಟೇಶನ ಹಾಗೂ ಪಹಣಿಗೆ ಸಂಭಂಧಿಸಿದ ಕೆಲಸ ಮಾಡಿ ಕೊಡಲು ಹಣದ ಬೇಡಿಕೆ ಇಟ್ಟ ಕೊಹಿನೂರ ನಾಡ ತಹಸೀಲ್ದಾರ ಶಿವಾನಂದ ಬಿರಾದಾರ ಎನ್ನುವಾತ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶುಕ್ರವಾರ ನಗರದಲ್ಲಿ ಜರುಗಿದೆ.
ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದ ನಿವಾಸಿ ಸುಧೀರ ಮಹಾದೇವ ದೊಂಬೆ ಅವರ ಜಮೀನಿಗೆ ಸಂಭಂದಿಸಿದ ಮುಟೇಶನ ಹಾಗೂ ಪಹಣಿಗಾಗಿ ಕೆಲಸ ಮಾಡಿ ಕೊಡಲು ಶಿವಾನಂದ ಬಿರಾದಾರ ಅವರು 2ಲಕ್ಷ 50 ಸಾವಿರ ರೂ. ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನ್ನು.ಹೀಗಾಗಿ ರೈತ ಸುಧೀರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು.
ಶುಕ್ರವಾರ ನಗರದ ನಾರಾಯಣಪೂರ ಕ್ರಾಸ್ ಬಳಿ ಮುಂಗಡವಾಗಿ 1 ಲಕ್ಷ ಹಣ ಸ್ವೀಕರಿಸುವಾಗ ಲೋಕಾಯುಕ್ತ ಡಿವೈಎಸ್‌ಪಿ ಎನ್‌ಎಮ್ ಓಲೇಕಾರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಉಪ ತಹಶೀಲ್ದಾರ ಶಿವಾನಂದ ಬಿರಾದಾರ ಅವರನ್ನು ಬಂಧಿಸಿದ್ದಾರೆ.


