ಹೊನ್ನಾಳಿ : ಮಹಾಸ್ವಾಮಿಗಳು ಮಾಸೂರು ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಗೆ ಹಿಂತಿರುಗವ ಸಂದರ್ಭದಲ್ಲಿ ಹೊನ್ನಾಳಿಯ ಉದ್ಯಮಿ ಮಂಜುನಾಥ್ ಮಾಳಕ್ಕಿ ಹಾಗೂ ಮಾಧ್ಯಮ ವರದಿಗಾರರಾದ ಮಲ್ಲೇಶ್ ಮಾಳಕ್ಕಿ ಅವರ ಮನೆಗೆ ಆಗಮಿಸಿ ಪಾದಪೂಜೆ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿ ಮಳೆಯ ಬಗ್ಗೆ ಮಾತನಾಡಿದಾಗ ರೈತರು ಮಳೆಯಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಮಳೆ ಬರುತ್ತದೆ ಇಲ್ಲ ಎನ್ನುವ ಪ್ರಶ್ನೆಗೆ ಮಳೆ ಬರುತ್ತದೆ ಅಮಾವಾಸ್ಯೆ ಕಳೆದ ಎರಡು ದಿನಗಳ ನಂತರ ಮಳೆ ಬರುತ್ತದೆ ಎಂದರು. ಮನುಷ್ಯ ಎಷ್ಟೇ ತಪ್ಪು ಮಾಡಿದರು ಭಗವಂತ ಕ್ಷಮಿಸುತ್ತಾನೆ ಮನುಷ್ಯ ತಾನೆ ಮಾಡಿದ ಪಾಪಕರ್ಮಗಳು ಅವನನ್ನ ಕ್ಷಮಿಸುವುದಿಲ್ಲ ಹಾಗಾಗಿ ಸಾಮೂಹಿಕ ತಪ್ಪುಗಳಿಗೆ ಎಡೆಯಿಲ್ಲದಂತಾಗಿದೆ ಅಜ್ಞಾನದಲ್ಲಿ ಮುಳುಗಿದ್ದಾನೆ ಕೇವಲ ಹಣವನ್ನು ದುಡಿಯದೇ ಅವನ ಕಾಯಕ ವಾಗಿದೆ.
ಪ್ರಕೃತಿಯು ಮುನಿತಾ ಇದೆ ಕಾಡನ್ನು ನಾಶ ಮಾಡಿದರು ಭೂಮಿಗೆ ತೊಂದರೆ ಮಾಡಿದರು ಅನೇಕ ಬಾರಿ ಪ್ರಕೃತಿಯ ಮೇಲೆ ತೊಂದರೆಗಳನ್ನು ಮಾಡುತ್ತಿದ್ದಾರೆ ಆದಾಗಿ ಪ್ರಕೃತಿ ವಿರೋಧವಾಗಿದೆ ಅಮವಾಸೆ ನಂತರ ಮಳೆ ಬರುತ್ತದೆ ಎಂದರು.
ಈ ಸರಕಾರ ೫ವರ್ಷ ಪೂರ್ಣ ಅವಧಿ ಅಧಿಕಾರ ಮಾಡುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕೋಡಿಹಳ್ಳಿ ಶ್ರೀಗಳು ದೇಶ ಮತ್ತು ರಾಷ್ಟ್ರ ಮತ್ತು ನಾಡು ಸಂಪತ್ ಭರಿತವಾಗಿದೆ. ಆಳುವವರು ಅರಿತು ಸರಿಯಾಗಿ ಉಪಯೋಗಿಸಕೊಂಡಲ್ಲಿ ಪೂರ್ಣಾವಧಿ ಸರ್ಕಾರ ಆಗುತ್ತದೆ,ಕರ್ನಾಟಕ ಸಂಪನ್ಮೂಲವಾಗಿದೆ ಎಂದರು.
ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗುತ್ತಾರ ,ನಾನು ಮೊದಲೇ ಹೇಳಿದ್ದೆ ರಾಜ್ಯದಲ್ಲಿ ಒಂದೇ ಪಕ್ಷ ಬರುತ್ತದೆ ಎಂದು ಹಾಗಾಗಿ ಕೇಂದ್ರದ ಸರ್ಕಾರದ ಬಗ್ಗೆ ಹೇಳಲು ಈಗ ಕಾಲ ಕೂಡಿ ಬಂದಿಲ್ಲ ಸಂಕ್ರಾಂತಿ ಹಾಗೂ ಕಾರ್ತಿಕ ಕಳೆಯಬೇಕು ಆಗ ಅವಘಡಗಳನ್ನು ಭಗವಂತನು ನಿವಾರಿಸದರೆ ಆಗ ಭವಿಷ್ಯ ಹೇಳಬಹುದು ಎಂದರು.
ಕಟ್ಟಿಗೆಯು ಆಡುತ್ತಿದೆ, ಕಬ್ಬಿಣವು ಓಡುತ್ತಿದೆ, ಅಬ್ಬಬ್ಬ ಗಾಳಿ ಮಾತಾಡಿತು, ಎಂದು ಅದರ ಅರ್ಥ ಬಿಡಿಸಿ ಹೇಳಿದರು ರೈಲು ಓಡುವುದು, ಮೊಬೈಲ್ ಗಾಳಿಯ ಮುಖಾಂತರ ಮಾತನಾಡುತ್ತಾರೆ ಮೊಬೈಲಿಗೆ ಸಿಮನ್ನು ಹಾಕುತ್ತಾರೆ ಅದೇ ಕಲ್ಲು ಕೋಳಿ ಕೂಗಿತೆಲೆ ಎಂದು ಹೇಳೋ ಅರ್ಥ ಎಂದರು. ಕೀಳು ಮಟ್ಟದ ರಾಜಕಾರಣಿಗಳು ಸನಾತನದ ಧರ್ಮದ ಬಗ್ಗೆ ಮಾತನಾಡುತ್ತಾರೆ ಹಾಗಾದರೆ ಅವರಿಗೆ ಏನು ಹೇಳಲು ಬಯಸುತ್ತೀರಾ ಯಾವುದು ಮನುಷ್ಯನಿಗೆ ನೆಮ್ಮದಿ ಸಂತೋಷವನ್ನು ಕೊಡುತ್ತದೆ ಅದು ಧರ್ಮ ಯಾವುದು ಡೊಂಬುರಾಟ ಹೊಡೆದಾಟ ಗದ್ದಲ ಅಶಾಂತಿ ಕಿತ್ತಾಟ ಮಾಡುವುದು ಧರ್ಮವಲ್ಲ ಧರ್ಮವೆನ್ನುವುದು ವ್ಯಾಖ್ಯಾನವಿದೆ ಅರ್ಥವಿದೆ ಎಂದರು.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರಾದ ನಾಗವೇಣಿ, ರಾಜೇಶ್ವರಿ, ಕಮಲಮ್ಮ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಭಕ್ತಾದಿಗಳು ಗುರುಗಳ ದರ್ಶನ ಹಾಗೂ ಆಶೀರ್ವಾದ ಪಡೆದರು.


