Thursday, March 12, 2026
Flats for sale
Homeರಾಜ್ಯಗಂಗಾವತಿ : ರಾಜಕೀಯದಲ್ಲಿ ಮಾತ್ರವಲ್ಲ, ಕಬ್ಬಡ್ಡಿಯಲ್ಲೂ ನಾನು ಸೈ : ಶಿವರಾಜ ತಂಗಡಗಿ.

ಗಂಗಾವತಿ : ರಾಜಕೀಯದಲ್ಲಿ ಮಾತ್ರವಲ್ಲ, ಕಬ್ಬಡ್ಡಿಯಲ್ಲೂ ನಾನು ಸೈ : ಶಿವರಾಜ ತಂಗಡಗಿ.

ಗಂಗಾವತಿ : ಎದುರಾಳಿಗಳೊಂದಿಗೆ ಕೇವಲ ರಾಜಕೀಯದಲ್ಲಿ ಮಾತ್ರವಲ್ಲ, ಮೈದಾನಕ್ಕೆ ಇಳಿದರೆ ನಾನು ಅಥ್ಲೆಟಿಕ್ ಮತ್ತು ಕಬ್ಬಡಿಯಂತ ಆಟಕ್ಕೂ ಸೈ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಕನಕಗಿರಿ ರಸ್ತೆಯಲ್ಲಿರುವ ಚನ್ನಬಸವಸ್ವಾಮಿ ತಾಲ್ಲೂಕು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಗಂಗಾವತಿ-ಕನಕಗಿರಿ ಮತ್ತು ಕಾರಟಗಿ ತಾಲ್ಲೂಕುಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.

ನಾನು ಹೈಸ್ಕೂಲ್ನಲ್ಲಿದ್ದಾಗ ಕಬ್ಬಡ್ಡಿ, ಜಾಆವೆಲಿನ್ ಥ್ರೋ, ಶಟರ್್ಪುಟ್ ಅಥ್ಲೆಟಿಕ್ನಂತ ಕ್ರೀಡೆಯಲ್ಲಿ ತಾಲ್ಲೂಕು, ಜಿಲ್ಲೆಯಲ್ಲಿ ವಿಜೇತನಾಗಿ ರಾಜ್ಯಮಟ್ಟಕ್ಕೂ ಹೋಗಿದ್ದೆ. ಮೂರು ಬಾರಿ ವಿಭಾಗಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೆ. ಆದರೆ ರಾಕ್ಯಮಟ್ಟದಲ್ಲಿ ಪ್ರಶಸ್ತಿ ಪಡೆಯಲಾಗಲಿಲ್ಲ ಎಂದು ತಮ್ಮ ಬಾಲ್ಯವನ್ನು ಸಚಿವ ನೆನೆಪಿಸಿಕೊಂಡರು.

ಸೋಲಿನ ರುಚಿ ಅನುಭವಿಸಿದಾಗಲೇ ಗೊತ್ತಾಗುತ್ತದೆ. ಸೋಲು ಎದುರಾದಾಗ, ಗೆಲುವಿನ ಛಲ ಉಂಟಾಗುತ್ತದೆ. ಸೋಲು ಪಡೆದ ಬಳಿಕವೇ ಗೆಲುವು ಅತ್ಯಂತ ಸರಳವಾಗಿ ಲಭಿಸುತ್ತದೆ.
ಉದಾಹರಣೆಗೆ ನಾನು ಕನಕಗಿರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಬಳಿಕ ಗೆಲ್ಲಬೇಕು ಎಂಬ ಛಲ ಉಂಟಾಯಿತು.

ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿ ಸತತ ಪರಿಶ್ರಮಟ್ಟ ಬಳಿಕ ಗೆಲುವು ತನ್ನಿಂದ ತಾನಾಗಿಯೇ ಬರುತ್ತದೆ. ನಾನು ಆರಂಭದಲ್ಲಿ ಆಟೋಟದಲ್ಲಿ ಗೆಲ್ಲುತ್ತಲೆ ಬಂದಿದ್ದೆ. ರಾಜಕೀಯದಲ್ಲಿ ನಾನು ಒಮ್ಮೆ ಸೋಲುಂಡ ಬಳಿಕ ನನಗೆ ರಾಜಕೀಯವಾಗಿ ಸಾಕಷ್ಟು ಅನುಭವ ಆಗಿದೆ.

ಸೋತವಿಗೆ ಗೆಲ್ಲಬೇಕೆಂಬ ಹಠ ಹೆಚ್ಚಿಗೆ ಬರುತ್ತದೆ. ಅದು ಆಟೋಟದಲ್ಲಿರಬಹುದು, ಸಾರ್ವಜನಿಕ ಜೀವನದಲ್ಲಿಯೇ ಇರಬಹುದು. ಹೀಗಾಗಿ ಸೋಲನ್ನು ಗೆಲುವಿನಷ್ಟೆ ಆದ್ಯತೆ ನೀಡಿ ಸ್ವೀಕರಿಸಬೇಕು. ಆಟೋಟದಲ್ಲಿ ಮತ್ತೊಬ್ಬರಿಗೆ ತೊಂದರೆ ನೀಡಬಾರದು ಎಂದು ತಂಡಗಗಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular