ಶಿಗ್ಗಾವಿ : ರಾಜಕಾರಣಿಗಳು ಚುನಾವಣೆಗೆ ಬಂದಾಗ ಮಾತ್ರ ಮನೆ ಮನೆ ತೆರಳಿ ಅವರಿಗೆ ಕಾಲ ಬಿದ್ದು ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲು ಖುದ್ದು ನಾನು ಇಲ್ಲೇ ಇರುತ್ತೇನೆ. ಅವರ ಸಮಸ್ಯೆಗಳಿಗೆ ವೇಗವಾಗಿ ಸ್ಪಂದಿಸುತ್ತೇನೆ. ತಮ್ಮ ಸಮಸ್ಯೆಗಳನ್ನು ಹೊತ್ತು ತಂದವರಿಗೆ ಕೂಡಲೇ ಸ್ಥಳದಲ್ಲಿಯೇ ಪರಿಹಾರ ನೀಡುತ್ತೇವೆ ಎನ್ನುತ್ತಾರೆ ಆದರೆ ಈಗ ಚುನಾವಣೆಯಲ್ಲಿ ಗೆದ್ದು ಬಂದು ನಾಲ್ಕು ತಿಂಗಳು ಆದರೂ ಕ್ಷೇತ್ರಕ್ಕೆ ಬರದ ಮಾಜಿ ಸಿಎಂ ಹಾಗೂ ಶಾಸಕರಾದ ಬಸವರಾಜ್ ಬೊಮ್ಮಾಯಿ ಕ್ಷೇತ್ರದ ಸಾರ್ವಜನಿಕರ ಮನದಾಳದ ಮಾತಾಗಿದೆ. ನಮ್ಮ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಶಾಸಕರು ಕ್ಷೇತ್ರಕ್ಕೆ ಬರಲು ಕಡಿಮೆ ಮಾಡಿದ್ದಾರೆ. ಅವರು ಗೆದ್ದ ಹೋದ ಮೇಲೆ ಬೆಂಗಳೂರಲ್ಲೇ ಇರುತ್ತಾರೆ.
ಚುನಾವಣಾ ಸಂದರ್ಭದಲ್ಲಿ ಜನರಿಗೆ ವಾರದಲ್ಲಿ ಮೂರು ದಿನ ಕ್ಷೇತ್ರದಲ್ಲಿ ಇರುತ್ತೇನೆಂದು ಹೇಳಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದಲ್ಲಿ ಎರಡು ವಾರಕ್ಕೊಮ್ಮೆ ಪ್ರವಾಸ ಹಮ್ಮಿ ಕೊಳ್ಳುತ್ತಿದ್ದು, ಜನರಿಗೆ ಮಾಜಿ ಸಿ ಎಂ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತದೆ.
ಇದು ಸಾರ್ವಜನಿಕರಿಗೆ ಬೇಸರ ತರಿಸಿದ್ದು ಕ್ಷೇತ್ರದ ಜನರ ಅವಾಲುಗಳನ್ನು ನೀಡಲು ಶಾಸಕರ ಕಚೇರಿಗೆ ಬಂದರೆ ನಮ್ಮ ಹವಾಲುಗಳನ್ನು ಸ್ವೀಕರಿಸಲು ಶಾಸಕರಿಲ್ಲ ಹಾಗಾಗಿ ತೀವ್ರ ಬೇಸರ ತರಿಸಿದೆ. ವಿಧಾನಸಭಾ ಕ್ಷೇತ್ರದ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು ಇದ್ದರೂ ಸಹಿತ ಪ್ರವಾಸ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ. ಯಾವಾಗ ಬರುತ್ತಾರೆ ಎಂಬುದು ಜನರಿಗೆ ಮಾಹಿತಿ ಕೊರತೆಯಿಂದ ಜನಸಾಮಾನ್ಯರಿಗೆ ತಮ್ಮ ಅಹವಾಲುಗಳನ್ನು ನೀಡಲು ಆಗುತ್ತಿಲ್ಲ. ಕ್ಷೇತ್ರಕ್ಕೆ ವಾರಕ್ಕೆ ಮೂರು ಬಾರಿ ಬಂದು ಕ್ಷೇತ್ರದಲ್ಲಿ ಇದ್ದರೆ ಜನರಿಗೆ ಸಮಯಾವಕಾಶ ಸಿಗುತ್ತದೆ. ಶಾಸಕರು ವಾರಕ್ಕೊಮ್ಮೆ,15 ದಿನಗಳಿಗೊಮ್ಮೆ ಕಾರ್ಯಕ್ರಮಗಳನ್ನು ನೀಡುತ್ತಿದ್ದರಿಂದ ಪಕ್ಷದ ಕಾರ್ಯಕ್ರಮಗಳಲ್ಲಿ ಹೆಚ್ಚಿನದಾಗಿ ಭಾಗವಹಿಸುತ್ತಿದ್ದು. ಎಲ್ಲೋ ಒಂದು ಕಡೆ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.
ಮಾಜಿ ಸಿಎಂ ಕ್ಷೇತ್ರಕ್ಕೆ ಬಂದಾಗ ಒಡನಾಡಿಗಳು ಆಪ್ತರು ಎನಿಸಿಕೊಂಡವರು ಹೆಚ್ಚಾಗಿ ತಮ್ಮ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಮುಂದೆ ಇರುತ್ತಾರೆ. ಸಾರ್ವಜನಿಕರು ಸಮಸ್ಯೆಗಳನ್ನು ಅಲ್ಲಿ ಹಿಡಿದು ನಿಂತುಕೊಂಡಿರವ ಪ್ರಸಂಗಗಳು ಕಂಡುಬರುತ್ತವೆ. ಶಾಸಕರ ಆಪ್ತರು ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಸರಿಪಡಿಸದೆ ನಿರಸ ಕಾಳಜಿ ತೋರುತ್ತಿರುವುದು ಕಂಡು ಬರುತ್ತದೆ. ಆಪ್ತರು ಎನಿಸಿಕೊಂಡವರು ಸಹಿತ ಬೇಜವಾಬ್ದಾರಿತನದಿಂದ ಕಾಣುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನಾದರೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರು ಬಿಟ್ಟು ಕ್ಷೇತ್ರದಲ್ಲಿ ಜನರಿಗೆ ತಮ್ಮ ಸಮಯಾವಕಾಶವನ್ನು ಕ್ಷೇತ್ರದ ಜನರ ಜೊತೆಗೆ ಬೆರೆಯುತ್ತಾರಾ ಎಂದು ಕಾದು ನೋಡಬೇಕಾಗಿದೆ.


