ಹೊನ್ನಾವರ: ಫೇಸಬುಕ್ ಮೂಲಕ ರಾಜ್ಯದ ಗೃಹಸಚೀವರ ಪೋಟೋ ಬಳಸಿ, ಸರಿಯಾದ ಉತ್ತರ ನೀಡಿ ಬಹುಮಾನ ಗೆಲ್ಲಿರಿ ಎನ್ನುವ ಶಿರ್ಷಿಕೆ ಬಳಸಿ ಎ.ಟಿ.ಎಂ.ಸರ್ಕಾರ, ಡಾ.ಜಿ.ಪರಮೇಶ್ವರ ವಂಶ ಉದ್ದಾರ ಮಾಡಲು ಹುಟ್ಟಿರುವ ಸನಾ ಪರಮೇಶ್ವರ ಜನ್ಮದಿನಾಂಕ ಎ. ನಿಜವಾದ ಜನ್ಮದಿನಾಂಕ, ಬಿ.ಲಿಂಗ ಬದಲಿಸಿಕೊಂಡ ಜನ್ಮದಿನಾಂಕ ಎಂದು ಸಚೀವರ ಪೋಟೋ ಸಮೇತ ಅವಹೇಳಕಾರಿ ಪೊಸ್ಟ ಮಾಡಿದ ರಾಘು ಮೇಸ್ತ ಎನ್ನುವ ಫೇಸಬುಕ್ ಖಾತೆಯ ವಿರುದ್ದ, ಪೊಲೀಸ್ ಠಾಣಿಯ ಕಾನಸ್ಟೇಬಲ್ ಮತ್ತು ಸೋಶಿಯಲ್ ಮೀಡಿಯಾ ಮಾನಟಿಂಗ್ ಸೆಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನಿಲ ಲಂಬಾಣಿ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ


