ಬಸವಕಲ್ಯಾಣ : ತಾಲೂಕಿನ ಕಾಂಬಳೆವಾಡಿ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು.ಗ್ರಾಮದ ಆದಿನಾಥೇಶ್ವರ ಮಂದಿರದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ವಿಶೇಷವಾಗಿ ಗಮನ ಸೆಳೆಯಿತು.ರಾಧೆ, ಶ್ರೀಕೃಷ್ಣನ ವೇಷ, ಭೂಷಣ ಧರಿಸಿದ ಮಕ್ಕಳು ನೃತ್ಯ ಮಾಡಿ ಗಮನ ಸೆಳೆದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಶರಣು ಸಲಗರ್ ಮಾತನಾಡಿ, ಧರ್ಮ ಆಧ್ಯಾತ್ಮದ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರು ಸದ್ಗುಣ ಬೆಳೆಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರುವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಶಾಸಕರು, ಕಾಂಬಳೆವಾಡಿ ಗ್ರಾಮದ ಸಮಗ್ರ ಪ್ರಗತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಭಾಲ್ಕಿಯ ಉಪನ್ಯಾಸಕ ಶಿವಾನಂದ ದಾಡಗಿ ವಿಶೇಷ ಉಪನ್ಯಾಸ ನೀಡಿ, ಜಗತ್ತಿಗೆ ಧರ್ಮ ಆಧ್ಯಾತ್ಮ ಪರಿಕಲ್ಪನೆ ನೀಡಿದ ಭಾರತ ದೇಶ ವಿಶ್ವದಲ್ಲೆ ಶ್ರೇಷ್ಠ ನೆಲವಾಗಿದೆ.
ಸನಾತ ಧರ್ಮ ಸಂಸ್ಕೃತಿಯ ಆಚರಣೆಗಳು ಯಾರು ಮರೆಯಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡ ಶಾಹುರಾಜ್ ಪಾಸ್ಮೆ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಶಿವಮ್ಮ ಲೋಡ್ಡೆ, ಉಪಾಧ್ಯಕ್ಷೆ ಶೀಲಾಬಾಯಿ ತ್ರೀಮುಖೆ, ಪ್ರಮುಖರಾದ ಬಲಭೀಮ್ ಕಾಂಬಳೆ, ಮಹಾಪೂರಿ ಸೂರ್ಯವಂಶಿ, ಶ್ರೀನಿವಾಸ ಕಾಂಬಳೆ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ರಾಜಕುಮಾರ್ ಕಾಂಬಳೆ ಹಾಗೂ ನಿವೃತ್ತ ಸರ್ಕಾರಿ ನೌಕರರು, ಸರ್ಕಾರಿ ಸೇವೆಗೆ ಹೊಸದಾಗಿ ನೇಮಕವಾದವರು ಮತ್ತು ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕೃಷ್ಣ ಪಿಲ್ಮಂಗೋಲೆ ಸ್ವಾಗತಿಸಿದರು, ಭಾಗವತ ಬೌದ್ದೆ ನಿರೂಪಿಸಿದರು.


