Thursday, March 12, 2026
Flats for sale
Homeರಾಜ್ಯರಾಯಚೂರು : ತಡರಾತ್ರಿ ಸುರಿದ ಮಳೆಗೆ ಕೊಚ್ಚಿ ಹೋದ ಮುಸ್ಟೂರು ಗ್ರಾಮದ ತಾತ್ಕಾಲಿಕ ಸೇತುವೆ.

ರಾಯಚೂರು : ತಡರಾತ್ರಿ ಸುರಿದ ಮಳೆಗೆ ಕೊಚ್ಚಿ ಹೋದ ಮುಸ್ಟೂರು ಗ್ರಾಮದ ತಾತ್ಕಾಲಿಕ ಸೇತುವೆ.

ರಾಯಚೂರು : ಮಾನ್ವಿ ಪಟ್ಟಣದ ತೂಗು ಅಳತೆ ಅಂತರದಲ್ಲಿ ಇರುವ ಮುಸ್ಟೂರು ಗ್ರಾಮಕ್ಕೆ ಒಂದು ತಿಂಗಳ ಹಿಂದೆ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ, ವಿಧಾನ ಪರಿಷತ್ ಸಭಾನಾಯಕ ಎನ್.ಎಸ್. ಬೋಸರಾಜು, ಶಾಸಕರು, ಅಧಿಕಾರಿಗಳು ಭೇಟಿ ನೀಡಿ. ಈ ಭಾಗದ ನೂರಾರು ರೈತರ ಹೊಲಗಳಿಗೆ ನೀರಿನ ಸೌಲಭ್ಯ ಲಭಿಸಲಿದೆ. ಈಗಾಗಲೇ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರು ಸೇರಿದಂತೆ ಇನ್ನಿತರರರು ಸಂಚರಿಸಲು 12 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗುತ್ತದೆ ಎಂದರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆದರೆ ಮುಸ್ಟೂರು ಗ್ರಾಮಕ್ಕೆ ತಾತ್ಕಾಲಿಕ ಸೇತುವೆ ನಿರ್ಮಾಣಗೊಂಡು ತಿಂಗಳ ಒಳಗೆ ತಡರಾತ್ರಿ ಸುರಿದ ಮಳೆಗೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿ  ಗ್ರಾಮಸ್ಥರ ಪರಿಸ್ಥಿತಿ ಪರದಾಡುವಂತಹ ಸ್ಥಿತಿ ಎದುರಾಗಿದೆ.

ಸುಮಾರು 20 ವರ್ಷಗಳಿಂದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವುದರಿಂದ ಪ್ರತಿ ಮಳೆಗಾಲ ಸಂದರ್ಭದಲ್ಲಿ ಗ್ರಾಮದ ಸಾರ್ವಜನಿಕರು ಪರಿಸ್ಥಿತಿ ವಿದ್ಯಾರ್ಥಿಗಳಿಗೆ, ರೈತರಿಗೆ, ಚಿಕ್ಕ ಚಿಕ್ಕ ಮಕ್ಕಳು ಅನಾರೋಗ್ಯ, ಗರ್ಭಿಣಿ ಬಾಣಂತಿಯರು, ಗ್ರಾಮದಲ್ಲಿ ಸಾವನ್ನಪ್ಪಿದ್ದಾರೆ ಅಂತ್ಯ ಸಂಸ್ಕಾರ ಮಾಡಲು ಸೇತುವೆ ಪಕ್ಕದಲ್ಲಿ ರುದ್ರ ಭೂಮಿ ಇರುವುದರಿಂದ ಅಂತ್ಯ ಸಂಸ್ಕಾರಕ್ಕೆ ಗ್ರಾಮದ ಜನರು ಪರದಾಡುವ ಸ್ಥಿತಿ.

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಪ್ರಚಾರಕ್ಕೆ ಬಿಟ್ಟರೆ, ಗೆದ್ದ ನಂತರ ಗ್ರಾಮದ ಕಡೆ ತಲೆಯ ಕೂಡ ಹಾಕಿ ಮಲಗುವುದಿಲ್ಲ, ತಾತ್ಕಾಲಿಕ ಸೇತುವೆ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಣ ಲೂಟಿ ಹೊಡೆಯುವ ಕೆಲಸ ಆಗಿದೆ ಇದರಿಂದ ಗ್ರಾಮಕ್ಕೆ ಯಾವುದೇ ಪ್ರಯೋಜನ ಇಲ್ಲಿಯವರೆಗೂ ಆಗಿಲ್ಲ.

ಪಟ್ಟಣದಿಂದ ಮೂರು ಕಿಲೋಮೀಟರ್ ಅಂತರದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ರೈತರಿಗೆ, ಗರ್ಭಿಣಿ ಮಹಿಳೆಯರು, ಸುಮಾರು 15 ವರ್ಷಗಳಿಂದ ಒಂದೇ ಒಂದು ಬಸ್ಸಿನ ವ್ಯವಸ್ಥೆ ಈ ಗ್ರಾಮಕ್ಕೆ ಇಲ್ಲ. ಇದರಿಂದ ತಾತ್ಕಾಲಿಕ ಆಟೋಗಳ ಅವಲಂಬನೆ ಯಾಗಿದ್ದಾರೆ. ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತಂದರು ಅಧಿಕಾರಿಗಳು ನಿರ್ಲಕ್ಷದ ಉತ್ತರ ನೀಡಿ ನಿಮ್ಮ ಗ್ರಾಮದ ರಸ್ತೆ ಹಾಗೂ ಸಂಪರ್ಕಿಸುವ ಸೇತುವೆ ಇಲ್ಲ ಎಂದು ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುವರು.

ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಇಚ್ಛ ಇಚ್ಛಾ ಶಕ್ತಿ ಕೊರತೆಯಿಂದ ಗ್ರಾಮಕ್ಕೆ ಈ ದುಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಧಿಕಾರಿ ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

RELATED ARTICLES

LEAVE A REPLY

Please enter your comment!
Please enter your name here

Most Popular