ಬೀದರ್ : ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಹೊಣೆ ಅರಿತು ಆದರ್ಶ ಪ್ರಜೆಗಳಾಗಬೇಕು ಎಂದು ಹುಲಸೂರ ಪೋಲಿಸ್ ಠಾಣೆಯ ಪಿಎಸ್ಐ ನಾಗೇಂದ್ರ ರವರು ಕಿವಿಮಾತು ಹೇಳಿದರು.
ಬೀದರ ಜಿಲ್ಲೆಯ ಹುಲಸೂರ ತಾಲ್ಲೂಕಿನ ತಮ್ಮ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ದ್ವಿಚಕ್ರ ವಾಹನ ಸವಾರರಿಗೆ ಸೂಕ್ತ ಸಂಚಾರ ಸಲಹೆಗಳು ನೀಡುವ ಉದ್ದೇಶದಿಂದ ಹುಲಸೂರ ಪಟ್ಟಣದ ಎಂ.ಕೆ.ಕೆ.ಪಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಾಮಾನ್ಯವಾಗಿ ರಸ್ತೆಯ ಮೇಲೆ ಬೈಕ್ ಮತ್ತು ಇತರೆ ವಾಹನ ಚಾಲನೆ ಮಾಡುವಾಗ ಹೆಚ್ಚು ಜೋಶ್ ತೋರಿಸುತ್ತಾರೆ.
ಇಂತಹ ಸಂದರ್ಭಗಳಲ್ಲಿ ದುರಂತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ತಮ್ಮ ಹಾಗೂ ಇತರರ ಜೀವಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬಹುದು ಎಂದು ಸಲಹೆ ನೀಡಿದರು.
ಜೋತೆಗೆ ಮನೆಯಲ್ಲಿ ಪೋಷಕರು ಹಾಗೂ ಕಾಲೇಜುಗಳಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳು ರಸ್ತೆ ಮೇಲೆ ಸಂಚರಿಸುವಾಗ ಪಾಲಿಸಬೇಕಾದ ನಿಯಮಗಳ ಕುರಿತು ಮನವೊಲಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಕಾಳಜಿ ವಹಿಸುವ ಮೂಲಕ ಯಾವುದೇ ಅಪಘಾತ ಸಂಭವಿಸುವುದಕ್ಕೆ ಆಸ್ಪದ ನೀಡದೆ, ಜಾಗ್ರತೆ ವಹಿಸಬೇಕು ಎಂದು ವಿವರಿಸಿದರು.
ಇದೇವೇಳೆ, ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಪ್ರತಿಜ್ಞೆ ಬೋಧಿಸಿದರು.
ಹಾಗೂ ಶಾಲಾ ಮಕ್ಕಳಿಂದ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಬಗ್ಗೆ ಸುರಕ್ಷತೆ: ಜಾಗೃತಿ ಜಾಥಾ ನಡೆಸಿದರು
ಈ ಸಂದರ್ಭದಲ್ಲಿ ಎಂ.ಕೆ.ಕೆ.ಪಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾನ್ಸಿಪಾಲರಾದ ಮಲ್ಲಿಕಾರ್ಜುನ ಕಾಂಬಳೆ ,ಉಪನ್ಯಾಸಕರು ,ಕಾಲೇಜಿನ ವಿದ್ಯಾರ್ಥಿಗಳು, ಆರಕ್ಷಕ ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು.


