ಮಂಗಳೂರು : ತಾನು RAW ಅಧಿಕಾರಿ ಎಂದು ಹೇಳಿ ವಂಚಿಸುತ್ತಿದ್ದ ನರ್ಸಿಂಗ್ ವಿದ್ಯಾರ್ಥಿಯನ್ನ ಮಂಗಳೂರಿನ ಉರ್ವಾ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಯುನಿಟಿ ನರ್ಸಿಂಗ್ ಕಾಲೇಜಿನಲ್ಲಿ ಕಳೆದ 6 ತಿಂಗಳಿನಿಂದ ಜಿಎನ್ಎಂ ಕೋರ್ಸ್ ಕಲಿಯುತ್ತಿದ್ದ ಕೇರಳದ ಇಡುಕ್ಕಿ ನಿವಾಸಿ 24 ವರ್ಷದ ಬೆನೆಡಿಕ್ಟ್ ಸಾಬು ಬಂಧಿತ ವಿದ್ಯಾರ್ಥಿ.ನರ್ಸಿಂಗ್ ಕಾಲೇಜ್ ಗೆ ಸೇರುವಾಗ ತಾನು ಕೇರಳ ಅಗ್ರಿಕಲ್ಚರ್ ಇಲಾಖೆಯ ಅಧಿಕಾರಿ ಎಂದು ಪ್ರಾಂಶುಪಾಲರಿಗೆ ತಿಳಿಸಿದ್ದ.ಬಳಿಕ ಕೇರಳದ ಪೊಲೀಸ್ ಇನ್ಸ್ ಪೆಕ್ಟರ್ ಎಂದಿದ್ದ,ಸದ್ಯ RAW ಫೀಲ್ಡ್ ಏಜೆಂಟ್ ಆಗಿದ್ದು ಅಂಡರ್ ಕವರ್ ಅಪರೇಷನ್ ನಲ್ಲಿರೋದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ.
ಇದೀಗ ಕಾಲೇಜಿನಲ್ಲಿ ಮಂಗಳೂರು ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಡ್ರಗ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಈತನ ವಂಚನೆ ಬೆಳಕಿಗೆ ಬಂದಿದೆ.ಕಾಲೇಜಿಗೆ ಡ್ರಗ್ಸ್ ಜಾಗೃತಿಗೆ ಬಂದಿದ್ದ ಮಂಗಳೂರು ಪೊಲೀಸರಿಗೆ ತಾನು RAW ಅಧಿಕಾರಿ ಎಂದು ಹೇಳಿಕೊಂಡಿದ್ದ ಬೆನೆಡಿಕ್ಟ್ ಸಾಬು,ತಾನು ಹೊಲಿಸಿಕೊಂಡಿದ್ದ ಪೊಲೀಸ್ ಸಮವಸ್ತ್ರ ಹಾಕಿಕೊಂಡೇ ತಿರುಗಾಡುತ್ತಿದ್ದ.ಈತನ ವರ್ತನೆಯಿಂದ ಅನುಮಾನಗೊಂಡ ಉರ್ವಾ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಧಿತನಿಂದ ನಕಲಿ ಐಡಿ ಕಾರ್ಡ್ ಗಳು,ಪೊಲೀಸ್ ಸಮವಸ್ತ್ರ,ಮೊಬೈಲ್ ಫೋನ್,ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ.ಈತನ ಈ ವಂಚನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.