Thursday, November 6, 2025
Flats for sale
Homeರಾಜ್ಯಹಾವೇರಿ : ಮೊಬೈಲ್ ಕದ್ದು ಫೋನ್ ಪೇ ಹಾಗೂ ಗೂಗಲ್ ಪೇ ಬಳಸಿ ಹಣ ಲಪಾಟಾಯಿಸುತ್ತಿದ್ದ...

ಹಾವೇರಿ : ಮೊಬೈಲ್ ಕದ್ದು ಫೋನ್ ಪೇ ಹಾಗೂ ಗೂಗಲ್ ಪೇ ಬಳಸಿ ಹಣ ಲಪಾಟಾಯಿಸುತ್ತಿದ್ದ 3 ಅಂತರ್ ರಾಜ್ಯ ಕಳ್ಳರ ಬಂಧನ.

ಹಾವೇರಿ : ಮೊಬೈಲ್ ಕದ್ದು ಅವುಗಳಲ್ಲಿ ಫೋನ್ ಪೇ ಹಾಗೂ ಗೂಗಲ್ ಪೇ ಬಳಸಿ ಹಣ ಲಪಾಟಾಯಿಸುತ್ತಿದ್ದ 3 ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಗುತ್ತಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿಎಸ್ಪಿ ಉಪವಿಭಾಗ ಹಾವೇರಿ ಇವರ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಸಿಪಿಐ ಸಂತೋಷ ಪವಾರ ಹಾಗೂ ಪಿಎಸ್ಐ ಶಂಕರಗೌಡ ಪಾಟೀಲ ಹಾಗೂ ಸಿಬ್ಬಂದಿ, ಟೆಕ್ನಿಕಲ್ ವಿಭಾಗದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಮೂಲದವರಾಗಿದ್ದು ಗುಂಜಾರಿಯಾ ಸಾಯಿಕುಮಾರ್ , ಅಕುಲ್ ವಡಿವೆಲು ಹಾಗೂ 12 ವಯಸ್ಸಿನ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 1.36 ಲಕ್ಷ ರೂಪಾಯಿ ಹಣ, 27 ವಿವಿಧ ಕಂಪನಿಯ ಮೊಬೈಲ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಇಂಡಿಗೋ ಕಾರವೊಂದನ್ನು ವಶಕ್ಕೆ ಪಡೆದಿದ್ದಾರೆ.

ತನಿಖೆ ಕೈಗೊಂಡ ಪೊಲೀಸರ ಕಾರ್ಯ ವೈಖರಿಗೆ ಪೊಲೀಸ್ ಅಧೀಕ್ಷಕ ಡಾ.ಶಿವಕುಮಾರ್ ಗುಣಾರೆ ಶ್ಲಾಘಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular