ಗಂಗಾವತಿ: ಇಲ್ಲಿನ ಸಕರ್ಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹುದ್ದೆಯ ಸಂಬಂಧ ಏರ್ಪಟ್ಟ ವಿವಾದವನ್ನು ಒಂದು ವಾರದ ಬಳಿಕ ಕೊನೆಗೂ ಇತ್ಯರ್ಥ ಮಾಡುವಲ್ಲಿ ಶಾಸಕ ಜಿ. ಜನಾರ್ದನರೆಡ್ಡಿ ಯಶಸ್ವಿಯಾಗಿದ್ದಾರೆ.
ಬುಧವಾರ ಕಾಲೇಜಿಗೆ ಭೇಟಿ ನೀಡಿದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಜನಾರ್ಧನರೆಡ್ಡಿ, ಕಾಲೇಜಿನ ವಿಚಾರಗಳು ಪದೇಪದೇ ಸಾರ್ವಜನಿಕರಲ್ಲಿ ಚಚರ್ೆಗೆ ಗ್ರಾಸವಾಗುವಂತೆ ಮಾಡಿದೆ. ಇದು ಕಾಲೇಜಿಗೆ ಕೆಚ್ಚು ಹೆಸರು ತರಲು ಕಾರಣವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹುದ್ದೆಯನ್ನು ಯಾರಿಗೂ ಹಸ್ತಾಂತರ ಮಾಡದಂತೆ ನಾನು ಒಂದು ವಾರದ ಹಿಮದೆ ಸೂಚನೆ ನೀಡದ ಬಳಿಕವೂ ನೀವು ಉದ್ದೇಶ ಪೂರ್ವಕವಾಗಿ ನಿಯಮಗಳನ್ನು ಮೀರಿ ಬೇರೆಒಬ್ಬರಿಗೆ ಕೊಟ್ಟಿದ್ದೀರಿ ಇದು ಸರಿಯಲ್ಲ ಎಂದು ನಿರ್ಗಮಿತ ಪ್ರಾಂಶುಪಾಲೆ ಜಗದೇವಿ ಅವರ ವಿರುದ್ಧ ಶಾಸಕ ಅಸಮಧಾನ ತೋಡಿಕೊಂಡರು.
ಈ ಸಂಬಂಧ ಇಲಾಖೆಯ ಮೇಲಧಿಕಾರಿಗಳ ಸೂಚನೆ ನೀಡದೇ ಮತ್ತು ನನ್ನ ಆದೇಶ ಪಾಲಿಸದೇ ನೀವು ಪ್ರಭಾರ ಪ್ರಾಂಶುಪಾಲ ಹುದ್ದೆಯನ್ನು ಬೇರೆಯವರಿಗೆ ಬಿಟ್ಟಿಕೊಟ್ಟಿದ್ದು ಸರಿಯಲ್ಲ. ಕೂಡಲೆ ಮತ್ತೆ ಪ್ರಾಂಶುಪಾಲ ಹುದ್ದೆಯನ್ನು ವಹಿಸಿಕೊಳ್ಳಬೇಕು.ಇನ್ನೊಂದು ವಾರದಲ್ಲಿ ಈ ಬಗ್ಗೆ ಸೂಕ್ತ ನಿಉಲುವು ತಳೆಯಲಿದ್ದು ಹೊಸ ಪ್ರಾಂಶುಪಾಲರನ್ನು ಕರೆತರುವುದು ಇಲ್ಲವೇ ನಿಯಮಗಳ ಪ್ರಕಾರ ಯಾರಿಗೆ ನೀಡಬೇಕು ಎಂದು ಚಚರ್ಿಸಿ ಸಊಕ್ತ ನಿಧರ್ಾರ ತಳೆಯೋಣ ಅಲ್ಲಿಯವರೆಗೂ ನೀವೆ ಪ್ರಾಂಶುಪಾಲ ಹುದ್ದೆಯಲ್ಲಿ ಮುಂದುವರೆಯುವಂತೆ ಶಾಸಕ ಜಗದೇವಿ ಕಳಶೆಟ್ಟಿ ಎಂಬುವವರಿಗೆ ಸೂಚನೆ ನೀಡಿದರು.
ಮುಂದಿನ ವಾರದಲ್ಲಿ ಮತ್ತೆ ಕಾಲೇಜಿನಲ್ಲಿ ಸಭೆ ನಡೆಸಿ ಅಗತ್ಯ ಅಭಿವೃದ್ಧಿ ವಿಚಾರ ಮಾತನಾಡೋಣ ಎಂದು ರೆಡ್ಡಿ ಹೇಳಿದರು. ಕೇವಲ ಎಂಟು ದಿನದ (ಆ.8) ಹಿಂದಷ್ಟೆ ಪ್ರಭಾರ ಪ್ರಾಂಶುಪಾಲ ಹುದ್ದೆ ವಹಿಸಿಕೊಂಡಿದ್ದ ಹಿರಿಯ ಉಪನ್ಯಾಸಕ ಜಾಜಿ ದೇವೇಂದ್ರಪ್ಪ ಶಾಸಕರ ಸೂಚನೆ ಮೆರೆಗೆ ಅಧಿಕಾರ ಹಸ್ತಾಂತರ ಮಾಡಿದರು.


