ಬಸವಕಲ್ಯಾಣ : ನಗರದ ತ್ರಿಪುರಾಂತನಲ್ಲಿ ಮನೆ ಬಳಿ ಆಟವಾಡುತಿದ್ದ ಸಮಯದಲ್ಲಿ ಮಗುವಿನ ಮೇಲೆ ಹಂದಿ ದಾಳಿ ಮಾಡಿದ ಘಟನೆ ವರದಿಯಾಗಿದೆ.
11 ವರ್ಷದ ತ್ರಿಪುರಾಂತ ನಿವಾಸಿ ಅಶ್ವಿನ್ ಲಾಖೆ ಹಂದಿಗಳ ದಾಳಿಯಿಂದ ಗಂಭೀರ ಗಾಯಗೊಂಡ ಬಾಲಕ. ಮನೆ ಬಳಿ ಆಟವಾಡುತಿದ್ದ ಸಮಯದಲ್ಲಿ ಹಂದಿಗಳ ಹಿಂಡಿನಿಂದ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ .
ಗಾಯಾಳು ಬಾಲಕನಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಪಾಲಕರು ದಾಖಲಿಸಿದ್ದಾರೆ .ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಾಗಿರುವ ಹಂದಿಗಳ ಕಾಟದಿಂದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ .


