Friday, November 22, 2024
Flats for sale
Homeರಾಜ್ಯವಿರಾಜಪೇಟೆ : ಆಕ್ರಮಣಕ್ಕೆ ನುಚ್ಚುನೂರಾದ ದೇಶದ ಸಂಸ್ಕೃತಿಯನ್ನು ಮತ್ತೊಮ್ಮೆ ಜೋಡಿಸುವ ಕಾರ್ಯಕ್ಕೆ ಪ್ರತಿಯೊಬ್ಬ ಹಿಂದು ಬಾಂಧವರು...

ವಿರಾಜಪೇಟೆ : ಆಕ್ರಮಣಕ್ಕೆ ನುಚ್ಚುನೂರಾದ ದೇಶದ ಸಂಸ್ಕೃತಿಯನ್ನು ಮತ್ತೊಮ್ಮೆ ಜೋಡಿಸುವ ಕಾರ್ಯಕ್ಕೆ ಪ್ರತಿಯೊಬ್ಬ ಹಿಂದು ಬಾಂಧವರು ಕೈಜೋಡಿಸಬೇಕು : ಮೇಜರ್ ಬಿದ್ದಂಡ ನಂಜಪ್ಪ.

ವಿರಾಜಪೇಟೆ: ಪರಕೀಯರ ದಾಳಿಗೆ ತುತ್ತಾಗಿ ಭಾರತವೂ ಛಿದ್ರಗೊಂಡು ಮಹೋನ್ನತವಾದ ಸಂಸ್ಕೃತಿಯ ಮೇಲೆ ದುರುಳರ ಆಕ್ರಮಣಕ್ಕೆ ನುಚ್ಚುನೂರಾದ ದೇಶದ ಸಂಸ್ಕೃತಿಯನ್ನು ಮತ್ತೊಮ್ಮೆ ಜೋಡಿಸುವ ಕಾರ್ಯಕ್ಕೆ ಪ್ರತಿಯೊಬ್ಬ ಹಿಂದು ಬಾಂಧವರು ಕೈಜೋಡಿಸಿ ಒಗ್ಗಟ್ಟಿನ ಮಂತ್ರ ಪಠಿಸಬೇಕೆಂದು ನಿವೃತ್ತ ಸೈನ್ಯಾಧಿಕಾರಿ ಮೇಜರ್ ಬಿದ್ದಂಡ ನಂಜಪ್ಪ ಕರೆ ನೀಡಿದರು.

ಹಿಂದು ಜಾಗರಣ ವೇದಿಕೆ ವಿರಾಜಪೇಟೆ ತಾಲ್ಲೂಕು ಘಟಕದ ವತಿಯಿಂದ ಅವರು ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ಮತ್ತು ವಿರಾಜಪೇಟೆಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೇಜರ್ ಬಿದ್ದಂಡ ನಂಜಪ್ಪ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತ ಖಂಡ ವಿವಿಧ ಸಂಸ್ಕೃತಿಗಳ ನೆಲೆವೀಡಾಗಿತ್ತು.ಡಚ್ಚರು, ಆಂಗ್ಲರು, ಮೊಗಲರು ಹೀಗೆ ಪರಕೀಯರ ದಾಳಿಗೆ ಒಳಪಟ್ಟು ಭಾರತ ಹಲವು ತುಂಡು-ತುಂಡುಗಳಾಗಿ ಕತ್ತರಿಸಿ ಹೋಯಿತು.

ಛಿದ್ರಗೊಂಡಿರುವ ಭಾರತದ ಮರುಜೋಡಣೆಗೆ ಜಾತೀಯತೆಯನ್ನು ತ್ಯಜಿಸಿ ಧರ್ಮ ಒಂದೇ ಎಂದು ಚಿಂತಿಸಿ ಅಖಂಡ ಭಾರತದ ನಿರ್ಮಾಣ ಮಾಡಬೇಕು ಎಂದರು.

ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ವಿದ್ಯಾ ಭಾರತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಧೀಮಂತ ಸಂಸ್ಕೃತಿ ನಮ್ಮದಾಗಿತ್ತು. ಅಕ್ರಮಣಕಾರರು, ಪ್ರಬಲಮತೀಯ ಪರಕೀಯರ ದಾಳಿಯಿಂದಾಗಿ ಅಖಂಡ ಭಾರತ ವಿಭಜನೆಗೊಂಡಿತು. ಧರ್ಮ ಮತ್ತು ಸಂಸ್ಕೃತಿಗಳ ಸಮಾನತೆಯಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾದ್ಯ. ವಿಭಜಿತವಾಗಿರುವ ಭಾರತವನ್ನು ಒಂದು ಮಾಡಲು ಎಲ್ಲಾ ಹಿಂದು ಬಾಂಧವರು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಲೆಮಾಡ ತಿಮ್ಮಯ್ಯ, ಜಿಲ್ಲಾ ಸಂಚಾಲಕ ಚಕ್ಕೇರ ಮನು, ಹಿಂದು ಜಾಗರಣಾ ವೇದಿಕೆಯ ತಾಲ್ಲೂಕು ಸಂಚಾಲಕ ಗಣೇಶ್ ಉಪಸ್ಥಿತರಿದ್ದರು.

ಹಿಂದೂಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಯೋಗೇಶ್, ಜಿಲ್ಲಾ ಘಟಕದ ಅನಿಲ್ ಸಿದ್ದಾಪುರ, ವಿರಾಜಪೇಟೆ ತಾಲ್ಲೂಕು ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.

ಬೃಹತ್ ಪಂಜಿನ ಮೆರವಣಿಗೆ

ವಿರಾಜಪೇಟೆ ನಗರದ ತೆಲುಗರ ಬೀದಿಯ ಮಾರಿಯಮ್ಮಾ ದೇವಾಲಯದ ಮುಂಭಾಗದಿಂದ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕರ್ತರು ಬೃಹತ್ ಪಂಜಿನ ಮೆರವಣಿಗೆಯನ್ನು ಸಂಜೆ 7ಕ್ಕೆ ಆರಂಭಿಸಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಂಜಿನ ಮೆರವಣಿಗೆ ರಾತ್ರಿ ಎಂಟರ ಸುಮಾರಿಗೆ ಮಹಿಳಾ ಸಮಾಜ ಸಭಾಂಗಣದಲ್ಲಿ ಅಂತ್ಯಗೊಂಡಿತು. ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಹಿಂದು ಬಾಂಧವರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular