ಬೆಳಗಾವಿ (ಕಿತ್ತೂರು) : ಎರಡು ತಿಂಗಳ ಹಿಂದೆ ನಿರ್ಮಿಸಿದ್ದ ಡಾಂಬರ್ ರಸ್ತೆ ಕಿತ್ತು ಹೋಗಿದು, ಗ್ರಾಮಸ್ಥರು ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿತ್ತೂರು ತಾಲ್ಲೂಕಿನ ದೇಗಾಂವ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯು ಎರಡು ತಿಂಗಳ ಹಿಂದಷ್ಟೇ 2 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣವಾಗಿದ್ದು, ಗ್ರಾಮಸ್ಥರು ಸುಗಮ ರಸ್ತೆ ನಿರ್ಮಾಣವಾಯಿತು ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಕೆಲವು ದಿನಗಳಿಂದ ಮಳೆಗೆ ಡಾಂಬರ ಮಾಯವಾಗಿ, ಕೇವಲ ಜಲ್ಲಿಕಲ್ಲು, ಗಿಲೀಟ್ ಪುಡಿ ಮಾತ್ರ ಉಳಿದಿದೆ.
ಈ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ರಸ್ತೆ ನಿರ್ಮಾಣವಾಗಿ ಎರಡು ತಿಂಗಳು ಮಾತ್ರ ಆಗಿದ್ದು, ಮಳೆಗೆ ಡಾಂಬರ್ ರಸ್ತೆ ಕಿತ್ತು ಹೋಗಿದ್ದು, ಕೇವಲ ಜಲ್ಲಿಕಲ್ಲುಗಳು ಮಾತ್ರ ಉಳಿದಿದೆ. ಕಳಪೆ ರಸ್ತೆ ಕಾಮಗಾರಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು


