ಉಡುಪಿ : ಜಿಲ್ಲೆಯಲ್ಲಿ ಜುಲೈ 6 ಗುರುವಾರವೂ ಮಳೆ ಮುಂದುವರಿದಿದೆ.
ತಗ್ಗು ಪ್ರದೇಶಗಳಲ್ಲಿ ಹಲವು ಮನೆಗಳು ಮುಳುಗುವ ಹಂತದಲ್ಲಿವೆ.
ನಗರದ ಕೊಡಂಕೂರಿನಲ್ಲಿ ಮಳೆ ನೀರಿನಿಂದ ಆವೃತವಾಗಿರುವ ಮನೆಗಳೊಳಗೆ ಹಲವು ಕುಟುಂಬಗಳು ವಾಸವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಕುಟುಂಬದ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಉಡುಪಿ ನಗರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಕಲ್ಸಂಕ, ಮಾಟದಬೆಟ್ಟು, ಬೈಲಕೆರೆ, ಬನ್ನಂಜೆ ಸಂಪೂರ್ಣ ಜಲಾವೃತಗೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಇಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.
ಕೃಷ್ಣ ಮಠದ ಪಾರ್ಕಿಂಗ್ ಜಾಗ ಸಂಪೂರ್ಣ ಮಳೆ ನೀರಿನಿಂದ ಜಲಾವೃತಗೊಂಡಿದೆ. ಕೃಷ್ಣಮಠಕ್ಕೆ ಎಸ್ಪಿ ಭೇಟಿ ನೀಡಿದರು.


