Thursday, March 12, 2026
Flats for sale
Homeಜಿಲ್ಲೆಮಂಗಳೂರು: ರೈಲಿನ ಕಿಟಕಿ ಗಾಜುಗಳನ್ನು ಹಾಳು ಮಾಡಿದ ಆರೋಪ,ಇಬ್ಬರ ಬಂಧನ.

ಮಂಗಳೂರು: ರೈಲಿನ ಕಿಟಕಿ ಗಾಜುಗಳನ್ನು ಹಾಳು ಮಾಡಿದ ಆರೋಪ,ಇಬ್ಬರ ಬಂಧನ.

ಮಂಗಳೂರು: ದಾದರ್-ತಿರುನೆಲ್ವೇಲಿ ರೈಲಿನ ಕಿಟಕಿ ಗಾಜುಗಳಿಗೆ ಕುಡುಗೋಲು ಬೀಸಿ ಅನಾಹುತ ಸೃಷ್ಟಿಸಿದ ಇಬ್ಬರನ್ನು ರೈಲ್ವೇ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಗೋವಾದಿಂದ ತಮಿಳುನಾಡಿನ ತಿರುನಲ್ವೇಲಿಗೆ ತೆರಳುತ್ತಿದ್ದ ಜಯಪ್ರಭು ಮತ್ತು ಪ್ರಸಾದ್ ಎಂಬುವವರೇ ಬಂಧಿತರು ಎಂದು ಮಂಗಳೂರು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರು ತೆಂಗಿನಕಾಯಿ ಕೀಳುವ ಕಾರ್ಯದಲ್ಲಿ ನಿರತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗೋವಾದಲ್ಲಿ ಕೆಲಸ ಮುಗಿಸಿ ತಮ್ಮ ಊರಿಗೆ ತೆರಳಲು ರೈಲು ಹತ್ತಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಇಬ್ಬರೂ ಕ್ಷುಲ್ಲಕ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ಕೈಯಲ್ಲಿ ಕುಡುಗೋಲು ಹಿಡಿದು ಜಗಳವಾಡಿದ್ದಾರೆ. ಗಲಾಟೆಯಲ್ಲಿ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಈ ಜಗಳವು ಪ್ರಯಾಣಿಕರಲ್ಲಿ ಭಯ ಮತ್ತು ಗೊಂದಲವನ್ನು ಉಂಟುಮಾಡಿತು, ಅವರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು.

ರೈಲು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಬಂದಾಗ ರೈಲ್ವೇ ಪೊಲೀಸರೊಂದಿಗೆ ಟಿಟಿಇಗಳು ಅವರನ್ನು ಬಂಧಿಸಿದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular