Monday, March 16, 2026
Flats for sale
Homeರಾಜ್ಯಬೆಂಗಳೂರು ; ಲೂಟಿ ಕೋರ ತಹಶಿಲ್ದಾರ್ ಅಜೀತ್ ರೈ 300 ಕೋಟಿಯ ಒಡೆಯ, ಬೇನಾಮಿ ಆಸ್ತಿ...

ಬೆಂಗಳೂರು ; ಲೂಟಿ ಕೋರ ತಹಶಿಲ್ದಾರ್ ಅಜೀತ್ ರೈ 300 ಕೋಟಿಯ ಒಡೆಯ, ಬೇನಾಮಿ ಆಸ್ತಿ ಪತ್ತೆಗೆ ಲೋಕಯುಕ್ತ ತಯಾರಿ!

ಬೆಂಗಳೂರು : ಸರಕಾರಿ ಕೆಲಸದಲ್ಲಿ ಇದ್ದು ಇತರ ಲ್ಯಾಂಡ್ ಮಾಫಿಯ ಡೀಲ್ ಮಾಡಿ ಕೋಟಿಗಟ್ಟಲೆ ಲೂಟಿಹೊಡೆದಿರುವ ತಹಶೀಲ್ದಾರ್​​​​ ಅಜಿತ್​​​​ ರೈ ಬೇನಾಮಿ ಆಸ್ತಿಪಾಸ್ತಿ ಪತ್ತೆ ಮಾಡಲು ಲೋಕಾಯುಕ್ತ ತಯಾರಿ ನಡೆಸಿದ್ದು, ಲೋಕಾ ಅಧಿಕಾರಿಗಳು ಅಜಿತ್​ ರೈ ಬೇನಾಮಿಗಳ ವಿಚಾರಣೆ ಮಾಡಲಿದ್ದಾರೆ. ಯಾರೇ ಜಮೀನು ಮಾರಾಟ ಮಾಡಿದ್ರೂ ಈತನೇ ಡೀಲ್ ಮಾಡ್ತಾ ಇದ್ದ.

ಇವನ ಅತಿಯಾದ ಆಶೆಯೆ ಈ ಗತಿಕೇಡಿಗೆ ಕಾರಣ , ಅಜಿತ್​​ ರೈ ಅಂತಿಂಥಾ ಆಸಾಮಿಯಲ್ಲ. ಅಜಿತ್ ರೈ ಕರ್ಮಕಾಂಡದ ಕಥೆಯೇ ರೋಚಕ ಸ್ಟೋರಿಯಾಗಿದೆ. ಅನುಕಂಪದ ನೌಕರಿ ಪಡೆದು ನೂರಾರು ಕೋಟಿ ಆಸ್ತಿ ಮಾಲೀಕನಾಗಿದ್ದಾನೆ. ಒಂದು ಕಡೆ ತಹಶೀಲ್ದಾರ್ ಮತ್ತೊಂದು ಕಡೆ ರಿಯಲ್ ಎಸ್ಟೇಟ್ ದಂಧೆ. ಅಜಿತ್ ರೈ ತಂದೆಯ ನಿಧನದ ನಂತರ ಅನುಕಂಪದ ನೌಕರಿ ಪಡೆದು ಕಂದಾಯ ಇಲಾಖೆ ಸೇರಿದ್ದಾನೆ.

ಅಜಿತ್ ರೈ ಕೆಲಸಕ್ಕೆ ಸೇರಿದ ನಂತರ ಇಲಾಖೆಯಲ್ಲಿ ಡೀಲ್ ಶುರು ಮಾಡಿದ್ದು, ಹಂತ ಹಂತವಾಗಿ ಪ್ರಮೋಷನ್ ಪಡೆದು ತಹಶೀಲ್ದಾರ್ ಆಗಿದ್ದಾನೆ. ಯಾವ KAS ಅಧಿಕಾರಿಗೂ ಕಡಿಮೆ ಇಲ್ಲದಂತೆ ಪೊಸ್ಟಿಂಗ್ ಪಡೆದು ದರ್ಬಾರು ಶುರು ಮಾಡಿದ್ದು, ದಾಳಿಯಲ್ಲಿ ಪತ್ತೆಯಾದ ಈತನ ಅಕ್ರಮ ಆಸ್ತಿ ಮೌಲ್ಯ ಬರೋಬ್ಬರಿ 300 ಕೋಟಿಗೂ ಅಧಿಕವಾಗಿದೆ. ಒಂದು ಕಡೆ ತಹಶೀಲ್ದಾರ್ ಹುದ್ದೆ ಮತ್ತೊಂದು ಕಡೆ ರಿಯಲ್ ಎಸ್ಟೇಟ್ ದಂಧೆ ಶುರುಮಾಡಿದ್ದು, ಈತ ತಹಶಿಲ್ದಾರ್ ಆಗಿದ್ದ ಜಾಗದಲ್ಲಿ ಯಾರೇ ಜಮೀನು ಮಾರಾಟ ಮಾಡಿದ್ರು ಈತನೇ ಡೀಲ್ ಮಾಡ್ತಾ ಇದ್ದ. ಡೀಲ್ ಮಾಡಿ ಮಾಡಿ ಅಕ್ರಮ ಆಸ್ತಿ ಬೇನಾಮಿ ವ್ಯಕ್ತಿಗಳ ಹೆಸರಿಗೆ ರಿಜಿಸ್ಟರ್ ‌ಮಾಡಿಸಿದ್ದ.

ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾದ ಆಸ್ತಿ ಪತ್ರದ ಮೌಲ್ಯ ಬರೋಬ್ಬರಿ 300 ಕೋಟಿಯಾಗಿದ್ದು, ಲೋಕಾ ಅಧಿಕಾರಿಗಳು ಇನ್ನೂ ಹಲವು ಕಡೆ ದಾಖಲೆ ಶೋಧ ಮಾಡ್ತಿದ್ದಾರೆ. ನೂರಾರು ಎಕರೆ ಜಮೀನು ಮಾಡಿಕೊಂಡಿರುವ ಅಜಿತ್​​​ ರೈನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ಲೋಕಾ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿ ಕಸ್ಟಡಿಗೆ ಕೇಳಿದ್ದು, 10 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲು ತಯಾರಿ ನಡೆಸಿದ್ದಾರೆ. ಅಜಿತ್​ ರೈ ಸೋದರ ಸೇರಿ ನಾಲ್ವರ ವಿಚಾರಣೆಗೂ ನೋಟಿಸ್​ ಬಂದಿದ್ದು, ಸೋದರ ಆಶಿಕ್, ಸ್ನೇಹಿತ ಗೌರವ್, ಹರ್ಷವರ್ಧನ್​​ ಸೇರಿ ನಾಲ್ವರಿಗೆ ನೋಟಿಸ್ ಕಳುಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular