ಉಡುಪಿ : ಉಡುಪಿ ಜಿಲ್ಲೆಯ ಪೆರ್ಡೂರು ಮೂಲದ ತೃಪ್ತಿ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಇವಳು ಸುರೇಶ್ ಮೆಂಡನ್ ಮತ್ತು ಹೇಮಾ ದಂಪತಿಗಳ ಎರಡನೇಯ ಪುತ್ರಿ.
ಹೆಬ್ರಿಯ ಎಸ್. ಆರ್, ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ತೃಪ್ತಿ ಶೈಕ್ಷಣಿಕ ವಿಚಾರದಲ್ಲಿ ಯಾವುದೇ ಆಕ್ಷೇಪಗಳು ಕೂಡ ಇರಲಿಲ್ಲ. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಮೊದಲು ಪಡೆಯುತ್ತಿದ್ದ ಅಂಕಕ್ಕಿಂತ 10 ಅಂಕ ಕಡಿಮೆ ಬಂದ ಹಿನ್ನಲೆಯಲ್ಲಿ, ಆಕೆಗೆ ಪ್ರಾಂಶುಪಾಲರು ಗದರಿಸಿದ್ದರು.
ಹೈಸ್ಕೂಲ್ ನಲ್ಲಿ ಆಕೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಳು. ಹಾಗಾಗಿ ಅದೇ ಶಿಕ್ಷಣ ಸಂಸ್ಥೆಯವರು ಫಸ್ಟ್ ಪಿಯುಸಿಗೆ ಉಚಿತ ಸೀಟ್ ಕೊಡಿಸಿದ್ದರು. ಉಚಿತ ಶಿಕ್ಷಣ ನೀಡುತ್ತಿರುವ ವಿಚಾರವನ್ನೇ ಮುಂದಿಟ್ಟುಕೊಂಡು ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಆಕೆಯನ್ನು ಪ್ರಾಚಾರ್ಯರು ಮತ್ತು ಉಪನ್ಯಾಸಕರು ಹೀಯಾಳಿಸಿದರು.
ಇದಕ್ಕೆ ತೀವ್ರವಾಗಿ ಮನನೊಂದ ಹದಿ ಹರೆಯದ, ಟಾಪರ್ ವಿದ್ಯಾರ್ಥಿನಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎಲ್ಲ ವಿದ್ಯಾರ್ಥಿಗಳು ಇದ್ದಾಗ ಪ್ರಾಂಶುಪಾಲರು ಗದರಿಸಿದರೆಂದು ಮನನೊಂದು ಕೊಂಡ ಹುಡುಗಿ ಆತ್ಮಹತ್ಯೆ ಶರಣಾಗಿದ್ದಾಳೆ. ಕಾಲೇಜು ಮುಗಿಸಿ ಪೆರ್ಡೂರುನಲ್ಲಿರುವ ತನ್ನ ಮನೆಗೆ ಬಂದವಳು ಮನನೊಂದು ನೇಣಿಗೆ ಶರಣಾಗಿದ್ದಾಳೆ. ಸದ್ಯ ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.