Sunday, November 22, 2026
Homeವಿದೇಶವಾಷಿಂಗ್ಟನ್ : ಭಾರತವನ್ನು ನೋಡಿ ಕಲೀರಿ: ಭಾರತದ ಆರ್ಥಿಕತೆಗೆ ಟ್ರಂಪ್ ಶಹಬ್ಬಾಸ್, ರಾಹುಲ್ ಗಾಂಧಿ ಟೀಕೆಗೆ...

ವಾಷಿಂಗ್ಟನ್ : ಭಾರತವನ್ನು ನೋಡಿ ಕಲೀರಿ: ಭಾರತದ ಆರ್ಥಿಕತೆಗೆ ಟ್ರಂಪ್ ಶಹಬ್ಬಾಸ್, ರಾಹುಲ್ ಗಾಂಧಿ ಟೀಕೆಗೆ ಅಮೆರಿಕದಿಂದಲೇ ಉತ್ತರ ನೀಡಿದ ಟ್ರಂಪ್ ..!

ವಾಷಿಂಗ್ಟನ್ : ಭಾರತದ ಆರ್ಥಿಕ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಜಿಡಿಪಿ ಬೆಳವಣಿಗೆ ದರ ಶೇ.7ರಷ್ಟಿದೆ. ಭಾರತವನ್ನು ನೋಡಿ ಇತರ ದೇಶಗಳು ಕಲಿಯಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಜಿಡಿಪಿ ಬೆಳವಣಿಗೆ ಶೇ.7 – ಟ್ರಂಪ್ ಮೆಚ್ಚುಗೆ!

ಭಾರತದಲ್ಲಿ ಬಡ್ಡಿದರ ಕಡಿಮೆ ಇರುವುದನ್ನೂ ಉಲ್ಲೇಖಿಸಿದ ಅಮೆರಿಕ ಅಧ್ಯಕ್ಷ!

ಭಾರತದ ಆರ್ಥಿಕ ಪ್ರಗತಿಯನ್ನು ಇತರ ದೇಶಗಳು ಮಾದರಿಯಾಗಿ ಪರಿಗಣಿಸಬೇಕು ಎಂಬ ಸಂದೇಶ!

ಎರಡು ದಿನಗಳ ಹಿಂದಷ್ಟೇ ಅಮೆರಿಕದಲ್ಲಿ ಭಾರತದ ಆರ್ಥಿಕತೆ ಕುರಿತು ಟೀಕಿಸಿದ್ದ ರಾಹುಲ್ ಗಾಂಧಿ!

ರಾಹುಲ್ ಗಾಂಧಿ ಆರೋಪಗಳಿಗೆ ಟ್ರಂಪ್ ಹೇಳಿಕೆ ತಿರುಗೇಟು ನೀಡಿದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ!

ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

ಭಾರತದ ಆರ್ಥಿಕತೆ ಹದಗೆಟ್ಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸುತ್ತಿರುವ ಬೆನ್ನಲ್ಲೇ ಟ್ರಂಪ್ ಅವರ ಹೇಳಿಕೆ ಹೊರಬಂದಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ.

ಬಿಜೆಪಿ ನಾಯಕ ಆಶಿಶ್ ಸೂದ್ ಪ್ರತಿಕ್ರಿಯಿಸಿ, ಭಾರತದ ಜಿಡಿಪಿ ಬೆಳವಣಿಗೆಯನ್ನು ಟ್ರಂಪ್ ಗುರುತಿಸಿರುವುದು ದೇಶದ ಜಾಗತಿಕ ಸ್ಥಾನಮಾನ ಮತ್ತು ಆರ್ಥಿಕ ಸಾಮರ್ಥ್ಯವನ್ನು ತೋರಿಸುತ್ತದೆ. ಜಗತ್ತೇ ಭಾರತದ ಪ್ರಗತಿಯನ್ನು ಗುರುತಿಸುತ್ತಿರುವಾಗ ಕಾಂಗ್ರೆಸ್ ಮಾತ್ರ ಅದನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಟ್ರಂಪ್ ಅವರಿಂದ ಭಾರತದ ಆರ್ಥಿಕತೆಗೆ ಮೆಚ್ಚುಗೆ ವ್ಯಕ್ತವಾಗಿರುವುದು ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ವಾಕ್ಸಮರಕ್ಕೆ ಹೊಸ ಅಸ್ತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular