ಮಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯಲ್ಲಿ ವಿಶೇಷ ತನಿಖಾ ತಂಡ (SIT) ಮಹತ್ವದ ಸಾಕ್ಷ್ಯವೊಂದರ ಪರಿಶೀಲನೆಗೆ ಮುಂದಾಗಿದೆ.
ಸೌಜನ್ಯ ಸಾವಿನ ರಹಸ್ಯಕ್ಕೆ ಉತ್ತರ ನೀಡಬಹುದೆಂದು ನಿರೀಕ್ಷಿಸಲಾಗಿರುವ 14 ವರ್ಷಗಳ ಹಿಂದಿನ ವೆಜಿನಲ್ ಸ್ವಾಬ್ ಮಾದರಿಯನ್ನು ಇದೀಗ ಮರುಪರೀಕ್ಷೆಗೆ ಕಳುಹಿಸಲಾಗಿದೆ.
ಏನಿದು 14 ವರ್ಷಗಳ ಹಿಂದಿನ ಸ್ಯಾಂಪಲ್?
2012ರ ಅಕ್ಟೋಬರ್ 10ರಂದು ಸೌಜನ್ಯ ಅವರ ವೆಜಿನಲ್ ಸ್ವಾಬ್ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅಕ್ಟೋಬರ್ 20ರಂದು ಬೆಳ್ತಂಗಡಿ ಪೊಲೀಸರು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆಗ ನಡೆಸಿದ ಪರೀಕ್ಷೆಯಲ್ಲಿ ಫಂಗಸ್ ಪತ್ತೆಯಾಗಿರುವುದಾಗಿ ವರದಿಯಾಗಿತ್ತು ಎಂದು ತಿಳಿದುಬಂದಿದೆ.
ಆದರೆ ಇದೀಗ ಅದೇ ಮಾದರಿಯನ್ನು ಮತ್ತೊಮ್ಮೆ ವೈಜ್ಞಾನಿಕವಾಗಿ ಪರೀಕ್ಷಿಸಲು SIT ಮುಂದಾಗಿದೆ.
ಹೈದರಾಬಾದ್ನ ಅಡ್ವಾನ್ಸ್ ಲ್ಯಾಬ್ಗೆ ರವಾನೆ!
ಫಂಗಸ್ ಇರುವ ಮಾದರಿಯಲ್ಲಿಯೂ DNA ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿರುವ ಹೈದರಾಬಾದ್ನ ಅತ್ಯಾಧುನಿಕ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಲಾಗಿದೆ ಎನ್ನಲಾಗಿದೆ.
ಸುಮಾರು 7–8 ದಿನಗಳ ಹಿಂದೆಯೇ SIT ತಂಡ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದು, DNA ಪರೀಕ್ಷಾ ವರದಿಗಾಗಿ ಕಾಯುತ್ತಿದೆ.
ವರದಿಯಲ್ಲಿ ಏನಿರಬಹುದು?
ಪ್ರಯೋಗಾಲಯದಿಂದ DNA ವರದಿ ಬಂದ ಬಳಿಕ ಅದರಲ್ಲಿ ಪತ್ತೆಯಾಗುವ DNA ಪ್ರೊಫೈಲ್ಗಳನ್ನು ತನಿಖೆಯಲ್ಲಿರುವ ಆರೋಪಿಗಳ DNA ಮಾದರಿಗಳೊಂದಿಗೆ ಹೋಲಿಕೆ ಮಾಡುವ ಸಾಧ್ಯತೆಯಿದೆ.
ಈ ಪರೀಕ್ಷೆಯ ಫಲಿತಾಂಶ ಸೌಜನ್ಯ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ನೀಡಬಹುದೇ ಎಂಬ ಕುತೂಹಲ ಮೂಡಿದೆ.
14 ವರ್ಷಗಳ ಬಳಿಕವೂ ಉತ್ತರ ಸಿಗದ ಪ್ರಶ್ನೆಗಳಿಗೆ ಈ ವರದಿ ಬೆಳಕು ಚೆಲ್ಲುತ್ತದೆಯೇ? ಈಗ ಎಲ್ಲರ ಗಮನ SIT ತನಿಖೆ ಮತ್ತು DNA ವರದಿಯತ್ತ!

