Friday, October 30, 2026
Homeಜಿಲ್ಲೆಮಂಗಳೂರು : ಸೌಜನ್ಯ ಪ್ರಕರಣ ಮರುತನಿಖೆ ಮತ್ತಷ್ಟು ಚುರುಕು : ಇಂದು 8 ಮಂದಿ ಪೊಲೀಸ್...

ಮಂಗಳೂರು : ಸೌಜನ್ಯ ಪ್ರಕರಣ ಮರುತನಿಖೆ ಮತ್ತಷ್ಟು ಚುರುಕು : ಇಂದು 8 ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳ ವಿಚಾರಣೆ ಆರಂಭ..!

ಮಂಗಳೂರು : ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (SIT) ಮತ್ತಷ್ಟು ಚುರುಕುಗೊಳಿಸಿದೆ. ಪ್ರಕರಣದ ಅಂದಿನ ತನಿಖಾಧಿಕಾರಿಗಳ ವಿಚಾರಣೆ ಬೆನ್ನಲ್ಲೇ ಇದೀಗ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿಚಾರಣೆ ಮುಂದುವರಿದಿದೆ.

ಇಂದು ಮಂಗಳೂರಿನ ಎಸ್‌ಐಟಿ ಕಚೇರಿಗೆ ಅಂದಿನ ತನಿಖೆಯಲ್ಲಿ ಕಾರ್ಯನಿರ್ವಹಿಸಿದ್ದ ಸುಮಾರು ಎಂಟು ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಲಿದ್ದಾರೆ. ಎಸ್‌ಐಟಿ ತನಿಖಾಧಿಕಾರಿಗಳಾದ ಲೋಕೇಶ್ ಜಗಲ್ಸಾರ್ ಹಾಗೂ ಮನೋಜ್ ಕುಮಾರ್ ನಾಯ್ಕ್ ಅವರು ವಿಚಾರಣೆ ನಡೆಸುತ್ತಿದ್ದಾರೆ.

ಈಗಾಗಲೇ ಅಂದಿನ ಎಎಸ್‌ಐ ಕಲೈಮಾರ್, ಹೆಡ್ ಕಾನ್ಸ್‌ಟೇಬಲ್ ಸುಂದರ್ ಶೆಟ್ಟಿ, ಮಹಿಳಾ ಹೆಡ್ ಕಾನ್ಸ್‌ಟೇಬಲ್ ಸವಿತಾ ಶೆಟ್ಟಿ ಹಾಗೂ ನಿವೃತ್ತ ಎಎಸ್‌ಐ ಕುಶಾಲಪ್ಪ ಗೌಡ ಅವರು ವಿಚಾರಣೆಗೆ ಹಾಜರಾಗಿದ್ದು, ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.

ಸೌಜನ್ಯ ಪ್ರಕರಣದ ಆರಂಭಿಕ ತನಿಖೆಯ ಸಂದರ್ಭದಲ್ಲಿ ಕೈಗೊಂಡ ಕ್ರಮಗಳು, ತನಿಖೆಯ ವೇಳೆ ಸಂಗ್ರಹಿಸಲಾದ ಮಾಹಿತಿ, ದಾಖಲೆಗಳು ಹಾಗೂ ಅಂದಿನ ತನಿಖೆಯ ವಿವಿಧ ಹಂತಗಳ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ.

ಪ್ರಕರಣದ ಮರುತನಿಖೆಯನ್ನು ಎಲ್ಲ ಆಯಾಮಗಳಿಂದಲೂ ನಡೆಸುತ್ತಿರುವ ಎಸ್‌ಐಟಿ, ಅಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ಪಾತ್ರ ಹಾಗೂ ಅವರಿಗೆ ತಿಳಿದಿರುವ ಮಾಹಿತಿಯನ್ನು ಪರಿಶೀಲಿಸುತ್ತಿದೆ.

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿಚಾರಣೆ ಬೆನ್ನಲ್ಲೇ ಫಾರೆನ್ಸಿಕ್ ತಜ್ಞರು ಹಾಗೂ ಅಂದಿನ ವೈದ್ಯಕೀಯ ಪ್ರಕ್ರಿಯೆಗೆ ಸಂಬಂಧಿಸಿದ ವೈದ್ಯರ ವಿಚಾರಣೆಯೂ ನಡೆಯುವ ನಿರೀಕ್ಷೆಯಿದೆ.

ಮರುತನಿಖೆ ಪೂರ್ಣಗೊಳಿಸಲು ಸುಮಾರು 50ರಿಂದ 60 ದಿನಗಳ ಕಾಲಾವಕಾಶ ಮಾತ್ರ ಉಳಿದಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖಾ ಪ್ರಕ್ರಿಯೆಗೆ ವೇಗ ನೀಡಿದೆ.

ಸೌಜನ್ಯ ಪ್ರಕರಣದ ಮರುತನಿಖೆಯಲ್ಲಿ ಅಂದಿನ ಪೊಲೀಸ್ ಅಧಿಕಾರಿಗಳ ವಿಚಾರಣೆಯಿಂದ ಯಾವೆಲ್ಲ ಹೊಸ ಮಾಹಿತಿ ಲಭ್ಯವಾಗಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular