ಮಂಗಳೂರು : ಆಟೋ ರಿಕ್ಷಾ ಪ್ರಯಾಣಿಕರಿಗೆ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಮೊದಲ 1.5 ಕಿ.ಮೀ. ಪ್ರಯಾಣಕ್ಕೆ ಕನಿಷ್ಠ ₹40 ದರ ನಿಗದಿಪಡಿಸಲಾಗಿದೆ. ಗರಿಷ್ಠ ಮೂರು ಮಂದಿ ಪ್ರಯಾಣಿಕರಿಗೆ ಈ ದರ ಅನ್ವಯವಾಗಲಿದೆ.
ಮೊದಲ 1.5 ಕಿ.ಮೀ. ನಂತರ ಪ್ರತಿ ಹೆಚ್ಚುವರಿ ಕಿಲೋಮೀಟರ್ಗೆ ₹20 ದರ ನಿಗದಿಪಡಿಸಲಾಗಿದೆ.
ಕಾಯುವಿಕೆ ದರ.
ಆಟೋ ಕಾಯುವಿಕೆಯ ಮೊದಲ 10 ನಿಮಿಷ ಉಚಿತವಾಗಿರಲಿದೆ. ಬಳಿಕ ಪ್ರತಿ 15 ನಿಮಿಷಕ್ಕೆ ಅಥವಾ ಅದರ ಭಾಗಕ್ಕೆ ₹5 ದರ ವಿಧಿಸಲು ಅವಕಾಶವಿದೆ.
ಲಗೇಜ್ಗೆ ದರ.
ಪ್ರಯಾಣಿಕರ ಲಗೇಜ್ಗೆ ಮೊದಲ 20 ಕೆ.ಜಿ.ವರೆಗೆ ಯಾವುದೇ ಶುಲ್ಕ ಇರುವುದಿಲ್ಲ. ನಂತರ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ₹5 ದರ ವಿಧಿಸಬಹುದಾಗಿದೆ.
ಲಗೇಜ್ ಸಾಗಿಸುವ ಸಂದರ್ಭದಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆಗಿರಬೇಕು. ರಾತ್ರಿ ವೇಳೆ 1.5 ಪಟ್ಟು ದರ
ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮಾತ್ರ ಮೇಲಿನ ಪರಿಷ್ಕೃತ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶ ನೀಡಲಾಗಿದೆ.
ಪರಿಷ್ಕೃತ ದರಗಳು:
ಮೊದಲ 1.5 ಕಿ.ಮೀ. – ₹40
ನಂತರದ ಪ್ರತಿ ಕಿ.ಮೀ. – ₹20
ಮೊದಲ 10 ನಿಮಿಷ ಕಾಯುವಿಕೆ – ಉಚಿತ
ನಂತರ ಪ್ರತಿ 15 ನಿಮಿಷ – ₹5
ಮೊದಲ 20 ಕೆ.ಜಿ. ಲಗೇಜ್ – ಉಚಿತ. ನಂತರ ಪ್ರತಿ 20 ಕೆ.ಜಿ. – ₹5 ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ – 1.5 ಪಟ್ಟು ದರ. ನಿಗದಿಪಡಿಸಲಾಗಿದೆ.

