Tuesday, February 3, 2026
Flats for sale
Homeರಾಜ್ಯಬೆಂಗಳೂರು: ರಾಜ್ಯದ ಡಿಜಿ ಮತ್ತು ಐಜಿಪಿಯಾಗಿ ಡಾ ಅಲೋಕ್ ಮೋಹನ್ ನೇಮಕ.

ಬೆಂಗಳೂರು: ರಾಜ್ಯದ ಡಿಜಿ ಮತ್ತು ಐಜಿಪಿಯಾಗಿ ಡಾ ಅಲೋಕ್ ಮೋಹನ್ ನೇಮಕ.

ಬೆಂಗಳೂರು ; ಡಾ.ಅಲೋಕ್ ಮೋಹನ್ ಅವರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ ಮತ್ತು ಐಜಿಪಿ) (ಪೊಲೀಸ್ ಫೋರ್ಸ್ ಮುಖ್ಯಸ್ಥ) ಆಗಿ ನೇಮಕಗೊಂಡಿದ್ದಾರೆ.

ಸಿಬಿಐ ನಿರ್ದೇಶಕರಾಗಿ ಡಿಜಿಪಿ ಪ್ರವೀಣ್ ಸೂದ್ ನೇಮಕಗೊಂಡ ನಂತರ ಆ ಸ್ಥಾನ ತೆರವಾಗಿತ್ತು.

ಮೇ 22 ರಿಂದ ಜಾರಿಗೆ ಬರುವಂತೆ ಬೆಂಗಳೂರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಅಧ್ಯಕ್ಷರ ಹುದ್ದೆಯೊಂದಿಗೆ ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್ ಡಾ ಅಲೋಕ್ ಮೋಹನ್ ಅವರಿಗೆ ಹೆಚ್ಚುವರಿ ಪ್ರಭಾರವನ್ನು ನೀಡಲಾಗಿದೆ.

ಡಾ ಅಲೋಕ್ ಮೋಹನ್ 1987 ರ ಬ್ಯಾಚ್ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. ಕಳೆದ 36 ವರ್ಷಗಳಿಂದ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಬೆಂಗಳೂರು ನಗರ ಅಪರಾಧ ವಿಭಾಗ, ಎಸಿಬಿ ಹಾಗೂ ಎಡಿಜಿಪಿ ಜಂಟಿ ಆಯುಕ್ತರಾಗಿದ್ದರು. ಅವರು ಏಪ್ರಿಲ್ 2025 ರಲ್ಲಿ ನಿವೃತ್ತರಾಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular