Friday, August 14, 2026
Homeರಾಜ್ಯಕಲಬುರಗಿ : ಪಾಕ್ ಸಂಪರ್ಕ ಆರೋಪ : ಸಮೀರ್ ಮೊಬೈಲ್ ಪರಿಶೀಲನೆ ವೇಳೆ ಶಾಕಿಂಗ್ ಮಾಹಿತಿ...

ಕಲಬುರಗಿ : ಪಾಕ್ ಸಂಪರ್ಕ ಆರೋಪ : ಸಮೀರ್ ಮೊಬೈಲ್ ಪರಿಶೀಲನೆ ವೇಳೆ ಶಾಕಿಂಗ್ ಮಾಹಿತಿ ಪತ್ತೆ.

ಕಲಬುರಗಿ : ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆರೋಪದಡಿ ಬಂಧಿತನಾಗಿರುವ ಸಮೀರ್ ಪ್ರಕರಣದಲ್ಲಿ ಪೊಲೀಸರು ನಡೆಸಿದ ಮೊಬೈಲ್ ಪರಿಶೀಲನೆಯ ವೇಳೆ ಮತ್ತಷ್ಟು ಮಹತ್ವದ ಮಾಹಿತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಸಮೀರ್ ವಿದೇಶಿ ಮೂಲದ ಮೊಬೈಲ್ ಸಂಖ್ಯೆಗಳ ಬಳಕೆ ಮಾಡುತ್ತಿದ್ದ ಎನ್ನಲಾಗಿದ್ದು, ಅವುಗಳ ಮೂಲಕ ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಲವರೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಪಾಕ್ ಮೂಲದ ಶಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕ?
ಸಮೀರ್ ಪಾಕಿಸ್ತಾನ ಮೂಲದ ಶಂಕಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಅಬೀದ್ ಜಟ್ ಹಾಗೂ ಶಹಜಾದ್ ಭಟ್ಟಿ ಎಂಬವರೊಂದಿಗೆ ಸಂಪರ್ಕದಲ್ಲಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನ ಮೊಬೈಲ್‌ನಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಫೋಟೋಗಳು ಹಾಗೂ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಅಲ್ಲದೆ, ಭಾರತದ ವಿರುದ್ಧದ ವಿಚಾರಗಳನ್ನು ಒಳಗೊಂಡಿರುವ ಹಲವು ವಿಡಿಯೋಗಳು ಕೂಡ ಮೊಬೈಲ್‌ನಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಭಾರತದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ ತೋರಿಸಿರುವ ರೀತಿಗೆ ಸಂಬಂಧಿಸಿದ ವಿಡಿಯೋ ಮೊಬೈಲ್ ಪರಿಶೀಲನೆ ವೇಳೆ ಭಾರತದ ನಕ್ಷೆಯನ್ನು ಒಳಗೊಂಡಿರುವ ವಿಡಿಯೋವೊಂದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಆ ವಿಡಿಯೋದಲ್ಲಿ ಜಮ್ಮು-ಕಾಶ್ಮೀರವನ್ನು ಭಾರತದ ಭಾಗದಿಂದ ಪ್ರತ್ಯೇಕವಾಗಿ ತೋರಿಸಿ, ಪಾಕಿಸ್ತಾನದೊಂದಿಗೆ ಜೋಡಿಸಿರುವ ರೀತಿಯ ಚಿತ್ರಣವಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ.

ಹಲವು ಶಂಕಿತ ವಾಟ್ಸಪ್ ಗ್ರೂಪ್‌ಗಳ ಸದಸ್ಯ ಸಮೀರ್ ‘ವೆಮನ್ ಮತ್ತು ಜಟ್ 333’, ‘ರಾಣಾ ಭಾಯ್ 333’ ಸೇರಿದಂತೆ ಹಲವು ಶಂಕಿತ ವಾಟ್ಸಪ್ ಗ್ರೂಪ್‌ಗಳ ಸದಸ್ಯನಾಗಿದ್ದ ಎನ್ನಲಾಗಿದೆ. ಈ ಗ್ರೂಪ್‌ಗಳಲ್ಲಿ ದೇಶವಿರೋಧಿ ಚಟುವಟಿಕೆ ಹಾಗೂ ಕೋಮು ಸಂಘರ್ಷಕ್ಕೆ ಕಾರಣವಾಗಬಹುದಾದ ವಿಚಾರಗಳು ಹಂಚಿಕೆಯಾಗಿದ್ದವು ಎಂಬ ಆರೋಪವೂ ಇದೆ.

20ಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಖಾತೆಗಳ ನಿರ್ವಹಣೆ ಬಂಧಿತ ಸಮೀರ್ ಹಲವು ಇನ್‌ಸ್ಟಾಗ್ರಾಂ ಖಾತೆಗಳನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದ್ದು, Sadarpura_underworld_333, Sadarpura_underworld,333Sadarpura_gang_underworld ಸೇರಿದಂತೆ ಸುಮಾರು 20 ಇನ್‌ಸ್ಟಾಗ್ರಾಂ ಐಡಿಗಳು ತನಿಖೆಯಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಪಾಕಿಸ್ತಾನ ಮೂಲದ ಶಂಕಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದುವುದರ ಜೊತೆಗೆ, ಭಯೋತ್ಪಾದಕ ಕೃತ್ಯಗಳಿಗೆ ವ್ಯಕ್ತಿಗಳನ್ನು ಸೇರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದ ಎಂಬ ಆರೋಪವೂ ಸಮೀರ್ ವಿರುದ್ಧ ಕೇಳಿಬಂದಿದೆ. ಸಮೀರ್ ವಿರುದ್ಧದ ಆರೋಪಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಮೊಬೈಲ್ ಫೋನ್‌ನಲ್ಲಿರುವ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ಬಳಿಕ ಪ್ರಕರಣದ ಇನ್ನಷ್ಟು ವಿವರಗಳು ಹೊರಬರುವ ಸಾಧ್ಯತೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular