Monday, August 3, 2026
Homeಕ್ರೀಡೆನವದೆಹಲಿ : ಗ್ಲಾಸ್ಕೊ ರೆಸ್ಟೋರೆಂಟ್‌ನಲ್ಲಿ ಭಾರತದ ನಕ್ಷೆ ಎಡವಟ್ಟು : ಬಾಕ್ಸರ್ ಲವಿನಾ ಅಸಮಾಧಾನ.

ನವದೆಹಲಿ : ಗ್ಲಾಸ್ಕೊ ರೆಸ್ಟೋರೆಂಟ್‌ನಲ್ಲಿ ಭಾರತದ ನಕ್ಷೆ ಎಡವಟ್ಟು : ಬಾಕ್ಸರ್ ಲವಿನಾ ಅಸಮಾಧಾನ.

ನವದೆಹಲಿ : ಗ್ಲಾಸ್ಕೊ ಕಾಮನ್ವೆಲ್ತ್ ಗೇಮ್ಸ್ ವೇಳೆ ರೆಸ್ಟೋರೆಂಟ್‌ವೊಂದರಲ್ಲಿ ಟಿಶ್ಯೂ ಪೇಪರ್ ಮೇಲೆ ಭಾರತದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿರುವ ಘಟನೆಗೆ ಭಾರತೀಯ ಬಾಕ್ಸರ್ ಲವಿನಾ ಬೊರ್ಗೊಹೈನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಬಾಕ್ಸರ್‌ಗಳು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 7 ಚಿನ್ನ ಹಾಗೂ 3 ಬೆಳ್ಳಿ ಸೇರಿ ಒಟ್ಟು 10 ಪದಕಗಳನ್ನು ಗೆದ್ದ ಸಂಭ್ರಮದಲ್ಲಿ ತಂಡವು ‘ಮಿಸ್ಟರ್ ಸಿಂಗ್್ಸ್ ಇಂಡಿಯಾ – ಹೋಮ್ ಆಫ್ ಕರಿ’ ರೆಸ್ಟೋರೆಂಟ್‌ಗೆ ಭೇಟಿ ನೀಡಿತ್ತು. ಈ ವೇಳೆ ನೀಡಲಾದ ಟಿಶ್ಯೂ ಪೇಪರ್‌ನಲ್ಲಿ ಭಾರತದ ನಕ್ಷೆಯಿಂದ ಈಶಾನ್ಯ ರಾಜ್ಯಗಳ ಭಾಗವನ್ನು ಕೈಬಿಡಲಾಗಿರುವುದನ್ನು ಲವಿನಾ ಗಮನಿಸಿದರು.

ಅಸ್ಸಾಂ ಮೂಲದ ಬಾಕ್ಸರ್ ಆಗಿರುವ ಲವಿನಾ ತಕ್ಷಣವೇ ರೆಸ್ಟೋರೆಂಟ್ ಸಿಬ್ಬಂದಿಯ ಗಮನಕ್ಕೆ ಈ ವಿಷಯವನ್ನು ತಂದರು. “ಇದನ್ನು ಅನ್ಯಥಾ ಭಾವಿಸಬೇಡಿ. ಭಾರತದ ನಕ್ಷೆ ತಪ್ಪಾಗಿರುವುದನ್ನು ನೋಡಿದಾಗ ನೋವಾಗುತ್ತದೆ. ದಯವಿಟ್ಟು ಇದನ್ನು ಸರಿಪಡಿಸಿ,” ಎಂದು ಅವರು ಮಾಲಕರಿಗೆ ವಿನಂತಿಸಿದರು.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತದ ನಕ್ಷೆಯನ್ನು ಸರಿಯಾಗಿ ಪ್ರದರ್ಶಿಸುವ ಅಗತ್ಯದ ಬಗ್ಗೆ ಹಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular