Tuesday, July 21, 2026
Homeವಿದೇಶಲಂಡನ್ : ಯುಕೆ ಹೊಸ ಪಿಎಂ ಆಗಿ ಲೇಬರ್ ಪಾರ್ಟಿಯ ಆ್ಯಂಡಿ ಇಂದು ಪಮಾಣ.

ಲಂಡನ್ : ಯುಕೆ ಹೊಸ ಪಿಎಂ ಆಗಿ ಲೇಬರ್ ಪಾರ್ಟಿಯ ಆ್ಯಂಡಿ ಇಂದು ಪಮಾಣ.

ಲಂಡನ್ : ಬ್ರಿಟನ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಲೇಬರ್ ಪಕ್ಷದ ನೂತನ ನಾಯಕ ಆ್ಯಂಡಿ ಬರ್ನ್ಹ್ಯಾಮ್ ಸೋಮವಾರ ಯುನೈಟೆಡ್ ಕಿಂಗ್‌ಡಮ್‌ನ ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಲೇಬರ್ ಪಕ್ಷದ ಆಂತರಿಕ ನಾಯಕತ್ವ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ 56 ವರ್ಷದ ಆ್ಯಂಡಿ ಬರ್ನ್ಹ್ಯಾಮ್, ಮಾಜಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ರಾಜಕೀಯ ಏರಿಳಿತ ಹಾಗೂ ಸಾರ್ವಜನಿಕ ಬೆಂಬಲ ಕುಸಿತದ ಹಿನ್ನೆಲೆಯಲ್ಲಿ ಸ್ಟಾರ್ಮರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆಗಿದ್ದ ಬರ್ನ್ಹ್ಯಾಮ್, ಇದೀಗ ಬ್ರಿಟನ್‌ನ ಅಧಿಕೃತ ಪ್ರಧಾನಿ ನಿವಾಸವಾದ 10 ಡೌನಿಂಗ್ ಸ್ಟ್ರೀಟ್ ಪ್ರವೇಶಿಸಲು ಸಜ್ಜಾಗಿದ್ದಾರೆ. ಅವರ ನೇತೃತ್ವದಲ್ಲಿ ಲೇಬರ್ ಸರ್ಕಾರ ಹೊಸ ಆಡಳಿತಕ್ಕೆ ಚಾಲನೆ ನೀಡಲಿದೆ.

ರಾಜಕೀಯ, ಆರ್ಥಿಕತೆ ಹಾಗೂ ಸಾರ್ವಜನಿಕ ಸೇವೆಗಳ ಕ್ಷೇತ್ರದಲ್ಲಿ ಹೊಸ ದಿಕ್ಕಿನ ಆಡಳಿತ ನೀಡುವ ಭರವಸೆಯೊಂದಿಗೆ ಆ್ಯಂಡಿ ಬರ್ನ್ಹ್ಯಾಮ್ ಅಧಿಕಾರ ಸ್ವೀಕರಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular