Saturday, July 18, 2026
Homeಜಿಲ್ಲೆಮೂಡುಬಿದಿರೆ : ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನ ಅಟ್ಟಹಾಸ ; ಸಾರ್ವಜನಿಕರಲ್ಲಿ ಆತಂಕ, ಪೊಲೀಸ್...

ಮೂಡುಬಿದಿರೆ : ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನ ಅಟ್ಟಹಾಸ ; ಸಾರ್ವಜನಿಕರಲ್ಲಿ ಆತಂಕ, ಪೊಲೀಸ್ ವಶಕ್ಕೆ.

ಮೂಡುಬಿದಿರೆ : ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನೊಬ್ಬ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಮಾಹಿತಿಯ ಪ್ರಕಾರ, ಆರೋಪಿ ಬಸ್ ನಿಲ್ದಾಣದಲ್ಲಿರುವ ಮೊಬೈಲ್‌ ಅಂಗಡಿಗೆ ತೆರಳಿ, ಅಲ್ಲಿದ್ದ ಯುವಕರಿಗೆ ಮಾರಕಾಯುಧ ತೋರಿಸಿ ಮೊಬೈಲ್ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಮೊಬೈಲ್ ನೀಡಲು ನಿರಾಕರಿಸಿದ ವೇಳೆ ಯುವಕರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಘಟನೆಯಿಂದ ಬಸ್ ನಿಲ್ದಾಣದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಆತಂಕಕ್ಕೊಳಗಾದರು.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆಯ ಹಿಂದಿನ ನಿಖರ ಕಾರಣ ಇನ್ನಷ್ಟೇ ಬಹಿರಂಗವಾಗಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular