Tuesday, August 18, 2026
Homeಕ್ರೀಡೆದುಬೈ : ಅಭಿಷೇಕ್ ಕೆಳಗಿಳಿಸಿ ನಂ.1ಕ್ಕೇರಿದ ಇಶಾನ್.

ದುಬೈ : ಅಭಿಷೇಕ್ ಕೆಳಗಿಳಿಸಿ ನಂ.1ಕ್ಕೇರಿದ ಇಶಾನ್.

ದುಬೈ : ಐಸಿಸಿ ಪ್ರಕಟಿಸಿರುವ ನೂತನ ಟಿ20 ಬ್ಯಾಟಿಂಗ್ ಶ್ರೇಯಾAಕದಲ್ಲಿ ಭಾರತದ ಯುವ ಬ್ಯಾಟರ್ ಇಶಾನ್ ಕಿಶನ್ ವಿಶ್ವದ ನಂಬರ್ 1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ಅವರು ತಮ್ಮದೇ ತಂಡದ ಸಹ ಆಟಗಾರ ಅಭಿಷೇಕ್ ಶರ್ಮಾ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಕಳೆದ 11 ತಿಂಗಳುಗಳಿAದ ನಂಬರ್ 1 ಸ್ಥಾನದಲ್ಲಿದ್ದ ಅಭಿಷೇಕ್ ಶರ್ಮಾ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಟಿ೨೦ ವಿಶ್ವಕಪ್‌ನಲ್ಲಿ ಇಶಾನ್ ಕಿಶನ್ ಭರ್ಜರಿ ಪ್ರದರ್ಶನ ನೀಡಿದ್ದರು. ಟೂರ್ನಿಯಲ್ಲಿ ಸುಮಾರು 200 ರ ಸ್ಟ್ರೈಕ್ ರೇಟ್‌ನಲ್ಲಿ 317 ರನ್ ಗಳಿಸುವ ಮೂಲಕ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸದ್ಯ ಇಶಾನ್ ಕಿಶನ್ 876 ರೇಟಿಂಗ್ ಪಾಯಿಂಟ್‌ಗಳೊAದಿಗೆ
ಮೊದಲ ಸ್ಥಾನದಲ್ಲಿದ್ದರೆ, ಅಭಿಷೇಕ್ ಶರ್ಮಾ 869 ಪಾಯಿಂಟ್‌ಗಳೊAದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ನಂತರ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular