Wednesday, July 1, 2026
Homeವಿದೇಶಪ್ಯಾರಿಸ್ : ಮಾರಕ ಬಿಸಿಗಾಳಿಯ ಹೊಡೆತ: ಫ್ರಾನ್ಸ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿ.

ಪ್ಯಾರಿಸ್ : ಮಾರಕ ಬಿಸಿಗಾಳಿಯ ಹೊಡೆತ: ಫ್ರಾನ್ಸ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿ.

ಪ್ಯಾರಿಸ್ : ಪಶ್ಚಿಮ ಯೂರೋಪ್‌ನಲ್ಲಿ ಮುಂದುವರಿದಿರುವ ತೀವ್ರ ಬಿಸಿಗಾಳಿಯ ಪರಿಣಾಮ ಫ್ರಾನ್ಸ್‌ನಲ್ಲಿ ಜೂನ್ 24ರಿಂದ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಫ್ರೆಂಚ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಾವನ್ನಪ್ಪಿದವರಲ್ಲಿ ಶೇ.85ರಷ್ಟು ಮಂದಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಾಗಿದ್ದು, ಕಳೆದ ತಿಂಗಳ ಸಾಮಾನ್ಯ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಸುಮಾರು 1,000 ಹೆಚ್ಚುವರಿ ಸಾವುಗಳು ದಾಖಲಾಗಿವೆ. ಇದು ಪ್ರಾಥಮಿಕ ಅಂಕಿಅಂಶವಾಗಿದ್ದು, ಅಂತಿಮ ವರದಿ ಪ್ರಕಟವಾದ ಬಳಿಕ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಮೃತರಲ್ಲಿ ಬಹುತೇಕರು ಪ್ಯಾರಿಸ್ ಹಾಗೂ ಅದರ ಉಪನಗರಗಳನ್ನು ಒಳಗೊಂಡ ‘ಇಲ್-ದೆ-ಫ್ರಾನ್ಸ್’ (Île-de-France) ಪ್ರದೇಶದ ನಿವಾಸಿಗಳಾಗಿದ್ದು, ಹೆಚ್ಚಿನವರು ತಮ್ಮ ಮನೆಗಳಲ್ಲೇ ಮೃತಪಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಫ್ರಾನ್ಸ್‌ನ ಹಲವು ಪ್ರದೇಶಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ದಾಖಲಾಗಿತ್ತು. ಭಾನುವಾರ ಮಾತ್ರ ಉಷ್ಣಾಂಶದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

ಯೂರೋಪಿನ ಹಲವು ರಾಷ್ಟ್ರಗಳಲ್ಲೂ ತೀವ್ರ ಬಿಸಿಗಾಳಿ ಮುಂದುವರಿದಿದ್ದು, ಸಾರಿಗೆ, ಆರೋಗ್ಯ ಸೇವೆ ಹಾಗೂ ಇಂಧನ ಪೂರೈಕೆ ವ್ಯವಸ್ಥೆಗಳ ಮೇಲೂ ಅದರ ಪರಿಣಾಮ ಬೀರಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular