Monday, June 22, 2026
Flats for sale
Homeಜಿಲ್ಲೆಬಂಟ್ವಾಳ : ಟೋಲ್ ತಪ್ಪಿಸಲು ವಾಹನಗಳ ದಾಂಧಲೆ ; ಬೂಮ್ ಬ್ಯಾರಿಯರ್ ಜಖಂ ಮಾಡಿ ಪರಾರಿ.

ಬಂಟ್ವಾಳ : ಟೋಲ್ ತಪ್ಪಿಸಲು ವಾಹನಗಳ ದಾಂಧಲೆ ; ಬೂಮ್ ಬ್ಯಾರಿಯರ್ ಜಖಂ ಮಾಡಿ ಪರಾರಿ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮಾರಕೊಟ್ಲು ಬಳಿಯಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಪಾವತಿಸದೇ ವಾಹನಗಳು ದಾಂಧಲೆ ನಡೆಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.

ಸಿಪಿಐ(ಎಂ) ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್‌ವೊಂದು ಟೋಲ್ ಶುಲ್ಕ ಪಾವತಿಸದೇ ಬೂಮ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಹಾನಿಗೊಳಿಸಿ ಸ್ಥಳದಿಂದ ಪರಾರಿಯಾಗಿರುವ ಆರೋಪ ಕೇಳಿಬಂದಿದೆ.

ಇದೇ ರೀತಿ ಹಲವು ವಾಹನಗಳು ಟೋಲ್ ಪಾವತಿಸದೇ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಕೆಲ ವಾಹನ ಚಾಲಕರು ಟೋಲ್ ತಪ್ಪಿಸಲು ಒನ್‌ವೇ ಮಾರ್ಗದಲ್ಲೇ ವಾಹನ ಚಲಾಯಿಸಿ ಅಪಾಯಕಾರಿ ರೀತಿಯಲ್ಲಿ ಸಂಚರಿಸಿರುವುದು ಕಂಡುಬಂದಿದೆ.

ಘಟನೆಗಳ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular