Wednesday, June 3, 2026
Flats for sale
Homeರಾಜ್ಯಮಡಿಕೇರಿ : ಸ್ವಂತ ಹಣ ಬಳಸಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ ಗ್ರಾಮಸ್ಥರು.

ಮಡಿಕೇರಿ : ಸ್ವಂತ ಹಣ ಬಳಸಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ ಗ್ರಾಮಸ್ಥರು.

ಮಡಿಕೇರಿ : ಸರ್ಕಾರದ ನಿರ್ಲಕ್ಷ್ಯದಿಂದ ಹಲವು ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿದ್ದ ಕೊಳಕೇರಿ–ಪೋಯೆಮಾಡಿ ರಸ್ತೆಯನ್ನು ಅಲ್ಲಿನ ಸಾರ್ವಜನಿಕರೇ ತಮ್ಮ ಸ್ವಂತ ಹಣ ಸಂಗ್ರಹಿಸಿ ಕಾಂಕ್ರೀಟ್ ಮಾಡುತ್ತಿರುವ ದೃಶ್ಯ ಇದೀಗ ಗಮನ ಸೆಳೆಯುತ್ತಿದೆ.

ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಮಸ್ಥರು, ಸರ್ಕಾರದ ನೆರವಿಗಾಗಿ ಕಾಯದೇ ಸ್ವತಃ ಮುಂದಾಗಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಸಾರ್ವಜನಿಕರ ಈ ಸಾಮಾಜಿಕ ಕಾಳಜಿ ಹಾಗೂ ಒಗ್ಗಟ್ಟಿನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗ್ರಾಮದ ಅಭಿವೃದ್ಧಿಗಾಗಿ ಕೈಜೋಡಿಸಿದ ಸ್ಥಳೀಯ ನಿವಾಸಿಗಳ ಈ ಪ್ರಯತ್ನ ಇತರರಿಗೆ ಮಾದರಿಯಾಗಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಗತ್ಯ ಮೂಲಸೌಕರ್ಯಗಳತ್ತ ಗಮನ ಹರಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.

ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕೊಳಕೇರಿ–ಪೋಯೆಮಾಡಿ ಭಾಗದ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular