Monday, June 1, 2026
Flats for sale
Homeರಾಜ್ಯಹಾಸನ: ಅತ್ಯಾಧುನಿಕ ವಾಟರ್ ಸ್ಪಿಂಕ್ಲರ್ ತಂತ್ರಜ್ಞಾನದ ವಿಶ್ವದಾಖಲೆ ಪ್ರಯೋಗ.

ಹಾಸನ: ಅತ್ಯಾಧುನಿಕ ವಾಟರ್ ಸ್ಪಿಂಕ್ಲರ್ ತಂತ್ರಜ್ಞಾನದ ವಿಶ್ವದಾಖಲೆ ಪ್ರಯೋಗ.

ಹಾಸನ : ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಸುಂಡೇಕೆರೆ ಸಮೀಪದ ಕಿರೇಹಳ್ಳಿಯಲ್ಲಿ, ವಿಶ್ವದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವಾಟರ್ ಸ್ಪಿಂಕ್ಲರ್ ವ್ಯವಸ್ಥೆಯ ಯಶಸ್ವಿ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಈ ಪ್ರಯೋಗದಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ 100 ಎಕರೆ ಕಾಫಿ ತೋಟಕ್ಕೆ ನೀರು ಪೂರೈಸುವ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ಆನಂದ್ ಪೆರೆರಾ ಹಾಗೂ ಗೀತಾ ಪೆರೆರಾ ಅವರ ಕಾಫಿ ಎಸ್ಟೇಟ್‌ನಲ್ಲಿ ಈ ಸಾಧನೆ ಪ್ರದರ್ಶಿಸಲಾಯಿತು.

ವಾಟರ್ ಜೆಟ್ ಇಂಜಿನಿಯರಿಂಗ್ ತಂಡವು ಈ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, ಮೈಕೆಲ್ ಸದಾನಂದ ಬ್ಯಾಪ್ಟಿಸ್ಟ್ ಅವರ ಮಾರ್ಗದರ್ಶನದಲ್ಲಿ ಸ್ಪಿಂಕ್ಲರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲು ಸಾವಿರಾರು ಕಾಫಿ ಬೆಳೆಗಾರರು ಆಗಮಿಸಿದ್ದರು. ಸ್ಪಿಂಕ್ಲರ್‌ನ ವೇಗ ಹಾಗೂ ವ್ಯಾಪಕ ಪ್ರದೇಶವನ್ನು ಅತಿ ಕಡಿಮೆ ಸಮಯದಲ್ಲಿ ನೀರಾವರಿ ಮಾಡುವ ಸಾಮರ್ಥ್ಯವನ್ನು ಕಂಡು ಬೆಳೆಗಾರರು ಆಶ್ಚರ್ಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನವೀನ್ ರಾಜ್ ಸಿಂಗ್ ಹಾಗೂ ದಿನೇಶ್ ಉಪಸ್ಥಿತರಿದ್ದರು. ಜೊತೆಗೆ ಕಾಫಿ ಬೋರ್ಡ್ ಅಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಿದರು. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ 1000 HP ಸಾಮರ್ಥ್ಯದ ಮೋಟಾರ್ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ಕಾಫಿ ತೋಟಗಳ ನೀರಾವರಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular