Wednesday, May 27, 2026
Flats for sale
Homeಜಿಲ್ಲೆಬಂಟ್ವಾಳ : ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಆಯ್ಕೆ.

ಬಂಟ್ವಾಳ : ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್‌ನ ನೂತನ ಪದಾಧಿಕಾರಿಗಳ ಆಯ್ಕೆ.

ಬಂಟ್ವಾಳ : ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆಯಲ್ಲಿ ಕಳೆದ 24 ವರ್ಷಗಳಿಂದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ) ಕಮ್ಮಾಜೆ ಹಾಗೂ ನಾಗಶ್ರೀ ಮಾತೃ ವೃಂದ ಕಮ್ಮಾಜೆ ತಂಡದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮೇ 17ರಂದು ತೆಂಕಬೆಳ್ಳೂರು ಧನುಪೂಜೆ ನಾಗಶ್ರೀ ವಿವೇಕ ಭವನದಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ಲೆಕ್ಕಪತ್ರ ಮಂಡನೆ ನಡೆಯಿತು. ಬಳಿಕ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.

ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ) ಕಮ್ಮಾಜೆಯ ಗೌರವ ಮಾರ್ಗದರ್ಶಕರಾಗಿ ಪೊಳಲಿ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಹಾಗೂ ಗೌರವ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅನಂತ್ ರಾಮ್ ಹೆರಳ್ ಆಯ್ಕೆಯಾದರು.

ಟ್ರಸ್ಟ್‌ನ ಅಧ್ಯಕ್ಷರಾಗಿ ಶ್ರೀ ಹರೀಶ್ ಮುಡೈಕೋಡಿ, ಉಪಾಧ್ಯಕ್ಷರಾಗಿ ಶ್ರೀ ತಿಮ್ಮಪ್ಪ ಕಮ್ಮಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ತಿರುಮಲೇಶ್ ಬೆಳ್ಳೂರು, ಜೊತೆ ಕಾರ್ಯದರ್ಶಿಯಾಗಿ ಶ್ರೀ ದುರ್ಗಾ ಪ್ರಸಾದ್ ಕಮ್ಮಾಜೆ, ಕೋಶಾಧಿಕಾರಿಯಾಗಿ ಶ್ರೀ ತಿರುಲೇಶ್ ಬೆಳ್ಳೂರು ಹಾಗೂ ಜೊತೆ ಕೋಶಾಧಿಕಾರಿಯಾಗಿ ಶ್ರೀ ಲೋಹಿತ್ ಹೆಬ್ಬಾರಬೆಟ್ಟು ಆಯ್ಕೆಯಾದರು.

ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ರಂಜಿತ್ ಕಮ್ಮಾಜೆ ಹಾಗೂ ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ಸುಧೀರ್ ತರವು ನೇಮಕಗೊಂಡರು. ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ರಾಮಚಂದ್ರ ವರಕೋಡಿ, ಶ್ರೀ ರಾಮದಾಸ್ ಕಮ್ಮಾಜೆ, ಶ್ರೀ ತಿಮ್ಮಪ್ಪ ಕುಲಾಲ್ ಕಮ್ಮಾಜೆ, ಶ್ರೀ ಚಂದ್ರಹಾಸ ಅಜಿನಡ್ಕ ಹಾಗೂ ಶ್ರೀ ಪದ್ಮನಾಭ ಮಂಗಾಜೆ ಆಯ್ಕೆಯಾದರು.

ಇನ್ನೊಂದೆಡೆ ನಾಗಶ್ರೀ ಮಾತೃ ವೃಂದ ಕಮ್ಮಾಜೆಯ 2026-27ನೇ ಸಾಲಿನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಸೌಮ್ಯ ಕಮ್ಮಾಜೆ, ಉಪಾಧ್ಯಕ್ಷರಾಗಿ ಲತಾ ಧನುಪೂಜೆ, ಪ್ರಧಾನ ಕಾರ್ಯದರ್ಶಿಯಾಗಿ ಶೋಭಿತಾ ಕಮ್ಮಾಜೆ, ಜೊತೆ ಕಾರ್ಯದರ್ಶಿಯಾಗಿ ಭವ್ಯ ಬೆಳ್ಳೂರು ಹಾಗೂ ಕೋಶಾಧಿಕಾರಿಯಾಗಿ ದಿವ್ಯ ಬೆಳ್ಳೂರು ಆಯ್ಕೆಯಾದರು.

ಕ್ರೀಡಾ ಕಾರ್ಯದರ್ಶಿಯಾಗಿ ನಿಶಾ ಕಮ್ಮಾಜೆ ಹಾಗೂ ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಹಂಸಿಕಾ ಧನುಪೂಜೆ ನೇಮಕಗೊಂಡರು. ಸಂಘಟನಾ ಕಾರ್ಯದರ್ಶಿಗಳಾಗಿ ಸುಮಾ ಕಮ್ಮಾಜೆ, ಸಂಧ್ಯಾ ಧನುಪೂಜೆ, ವೇದಾವತಿ ಧನುಪೂಜೆ, ಸುಸ್ಮಿತಾ ಧನುಪೂಜೆ ಹಾಗೂ ರಮಿತಾ ಧನುಪೂಜೆ ಆಯ್ಕೆಯಾದರು.

ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಮರ್ಪಣೆ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular