Monday, May 18, 2026
Flats for sale
Homeದೇಶಅಮರಾವತಿ : ಜನಸಂಖ್ಯೆ ಹೆಚ್ಚಿಸಲು ಆಂಧ್ರ ಸರ್ಕಾರದ ಹೊಸ ಯೋಜನೆ,3ನೇ ಮಗುವಿಗೆ ₹30 ಸಾವಿರ, 4ನೇ...

ಅಮರಾವತಿ : ಜನಸಂಖ್ಯೆ ಹೆಚ್ಚಿಸಲು ಆಂಧ್ರ ಸರ್ಕಾರದ ಹೊಸ ಯೋಜನೆ,3ನೇ ಮಗುವಿಗೆ ₹30 ಸಾವಿರ, 4ನೇ ಮಗುವಿಗೆ ₹40 ಸಾವಿರ ಘೋಷಣೆ.

ಅಮರಾವತಿ : ರಾಜ್ಯದಲ್ಲಿ ಕುಸಿಯುತ್ತಿರುವ ಜನನ ಪ್ರಮಾಣವನ್ನು ಸಮತೋಲನಗೊಳಿಸಲು ಆಂಧ್ರಪ್ರದೇಶ ಸರ್ಕಾರ ಹೊಸ ಪ್ರೋತ್ಸಾಹ ಯೋಜನೆಯನ್ನು ಘೋಷಿಸಿದೆ.ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕುಟುಂಬದಲ್ಲಿ ಮೂರನೇ ಮಗು ಜನಿಸಿದರೆ ₹30,000 ಹಾಗೂ ನಾಲ್ಕನೇ ಮಗು ಜನಿಸಿದರೆ ₹40,000 ನಗದು ಪ್ರೋತ್ಸಾಹಧನ ನೀಡಲಾಗುವುದು ಎಂದು ಘೋಷಿಸಿದರು.

ಇದಕ್ಕೂ ಮೊದಲು ಎರಡನೇ ಮಗು ಜನಿಸಿದರೆ ₹25,000 ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿತ್ತು. ಇದರ ಜೊತೆಗೆ ಎರಡನೇ ಮತ್ತು ಮೂರನೇ ಮಗುವಿಗೆ 18 ವರ್ಷ ವಯಸ್ಸಿನವರೆಗೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡುವ ಯೋಜನೆಯನ್ನೂ ಸರ್ಕಾರ ರೂಪಿಸಿದೆ.

ಮೂರನೇ ಮಗುವಿನ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ಪ್ರತಿಮಾಸ ಸಹಾಯಧನ ನೀಡುವ ಪ್ರಸ್ತಾವನೆಯೂ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಲಾಗಿದೆ.“ಮಕ್ಕಳು ಕುಟುಂಬಕ್ಕೆ ಹೊರೆಯಲ್ಲ, ದೇಶದ ಅಭಿವೃದ್ಧಿಗೆ ಅಮೂಲ್ಯವಾದ ಆಸ್ತಿ,” ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ರಾಜ್ಯದಲ್ಲಿ ಜನನ ಪ್ರಮಾಣ ನಿರಂತರವಾಗಿ ಕುಸಿಯುತ್ತಿರುವ ಹಿನ್ನೆಲೆ ಭವಿಷ್ಯದಲ್ಲಿ ಕಾರ್ಮಿಕ ಶಕ್ತಿ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸರ್ಕಾರ ಈ ರೀತಿಯ ವಿಶೇಷ ಯೋಜನೆ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular