ಮಂಗಳೂರು ; ಬಾಲಿವುಡ್ ನಟಿ ಶ್ಲಿಪಾ ಶೆಟ್ಟಿ ಅವರು ತಮ್ಮ ಪತಿ ರಾಜ್ ಕುಂದ್ರಾ, ಮಕ್ಕಳು, ಸಹೋದರಿ ಶಮಿತಾ ಶೆಟ್ಟಿ ಮತ್ತು ತಾಯಿಯೊಂದಿಗೆ ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಹೆಣ್ಣು ಮಗುವನ್ನು ಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಶಿಲ್ಪಾ ದೇವರಿಗೆ ಸೀರೆಯನ್ನು ಅರ್ಪಿಸಿದರು.
ಅನುವಂಶಿಕ ಧರ್ಮದರ್ಶಿ ವಾಸುದೇವ ಆಸ್ರಣ್ಣ ಪ್ರಸಾದ ವಿತರಿಸಿದರು. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಹರಿ ಆಸ್ರಣ್ಣ, ನ್ಯಾಯವಾದಿ ರವಿ ಪೂಜಾರಿ ಉಪಸ್ಥಿತರಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಪ್ಪ ಸೇರಿಗಾರ್ ಅವರಿಂದ ನಾಗಸ್ವರ ವಾದನವನ್ನು ಆಲಿಸಿದ ಶಿಲ್ಪಾ ಮತ್ತು ಅವರ ಕುಟುಂಬದವರು ನಂತರ ರಥಬೀದಿಯಲ್ಲಿ ಯಕ್ಷಗಾನವನ್ನು ವೀಕ್ಷಿಸಿದರು.