Sunday, May 10, 2026
Flats for sale
Homeರಾಜ್ಯಬೆಂಗಳೂರು : ವರದಕ್ಷಿಣೆ ಪ್ರಕರಣಗಳಲ್ಲಿ ಬೆಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ.

ಬೆಂಗಳೂರು : ವರದಕ್ಷಿಣೆ ಪ್ರಕರಣಗಳಲ್ಲಿ ಬೆಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ.

ಬೆಂಗಳೂರು : ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ಬೆಂಗಳೂರು ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ಪ್ರಕಟಿಸಿರುವ ಕ್ರೈಮ್ ಇನ್ ಇಂಡಿಯಾ–2024 ವರದಿ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 878 ವರದಕ್ಷಿಣೆ ಪ್ರಕರಣಗಳು ದಾಖಲಾಗಿವೆ. ದೇಶದ ಮಹಾನಗರಗಳಲ್ಲಿ ಒಟ್ಟು 1,008 ವರದಕ್ಷಿಣೆ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಸುಮಾರು 87 ಶೇಕಡಾ ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಲಕ್ನೋದಲ್ಲಿ 48 ವರದಕ್ಷಿಣೆ ಪ್ರಕರಣಗಳು ದಾಖಲಾಗಿದ್ದರೆ, ದೆಹಲಿಯಲ್ಲಿ 109 ಪ್ರಕರಣಗಳು ದಾಖಲಾಗಿವೆ. ಚೆನ್ನೈ, ಕೊಲ್ಕತ್ತಾ, ಕೊಚ್ಚಿ ಮತ್ತು ಕೊಯಮತ್ತೂರು ಸೇರಿದಂತೆ ಹಲವಾರು ದಕ್ಷಿಣ ಭಾರತೀಯ ನಗರಗಳಲ್ಲಿ ಯಾವುದೇ ವರದಕ್ಷಿಣೆ ಸಾವುಗಳು ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ. 2024ರಲ್ಲಿ ಬೆಂಗಳೂರಿನಲ್ಲಿ 25 ವರದಕ್ಷಿಣೆ ಸಾವುಗಳು ದಾಖಲಾಗಿವೆ. ಹೈದರಾಬಾದ್‌ನಲ್ಲಿ 14 ವರದಕ್ಷಿಣೆ ಸಾವುಗಳು ದಾಖಲಾಗಿವೆ.

ಮಹಿಳೆಯರ ವಿರುದ್ಧ ಅಪರಾಧಗಳಲ್ಲೂ ಬೆಂಗಳೂರು ಮುಂದಿದೆ.ವಿಶೇಷ ಮತ್ತು ಸ್ಥಳೀಯ ಕಾನೂನುಗಳಡಿ ಮಹಿಳೆಯರ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳಲ್ಲಿಯೂ ಬೆಂಗಳೂರು 1,051 ಪ್ರಕರಣಗಳೊಂದಿಗೆ ದೇಶದ ಮಹಾನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಮಹಿಳೆಯರ ಲಜ್ಜೆಭಂಗಕ್ಕೆ ಸಂಬಂಧಿಸಿದ ಕ್ರಿಮಿನಲ್ ಬಲಪ್ರಯೋಗ ಪ್ರಕರಣಗಳಲ್ಲೂ ಬೆಂಗಳೂರು 897 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಮುಂಬೈ 857 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಪತ್ನಿಯರ ಮೇಲಿನ ಕ್ರೌರ್ಯ ಪ್ರಕರಣಗಳು

ಗಂಡಂದಿರು ಅಥವಾ ಅತ್ತೆಮಾವಂದಿರಿಂದ ಪತ್ನಿಯರ ಮೇಲಿನ ಕ್ರೌರ್ಯ ಪ್ರಕರಣಗಳು ಕರ್ನಾಟಕದಲ್ಲಿ 2,947 ದಾಖಲಾಗಿವೆ. ರಾಜ್ಯವಾರು ಅಂಕಿಅಂಶಗಳಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 21,266 ಪ್ರಕರಣಗಳು ದಾಖಲಾಗಿದ್ದರೆ, ರಾಜಸ್ಥಾನದಲ್ಲಿ 10,578 ಹಾಗೂ ಮಹಾರಾಷ್ಟ್ರದಲ್ಲಿ 10,538 ಪ್ರಕರಣಗಳು ದಾಖಲಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular