Wednesday, March 25, 2026
Flats for sale
Homeರಾಜಕೀಯತಿರುವನಂತಪುರಂ : ಬಿಜೆಪಿ ಸೇರಿದ ಸಿಪಿಐ(ಎಂ) ಪಕ್ಷದ ಪ್ರಭಾವಿ ನಾಯಕನ ಪುತ್ರಿ.

ತಿರುವನಂತಪುರಂ : ಬಿಜೆಪಿ ಸೇರಿದ ಸಿಪಿಐ(ಎಂ) ಪಕ್ಷದ ಪ್ರಭಾವಿ ನಾಯಕನ ಪುತ್ರಿ.

ತಿರುವನಂತಪುರಂ : ಕೇರಳ ವಿಧಾನಸಭೆ ಹೊಸ್ತಿಲಲ್ಲಿ ಆಡಳಿತಾರೂಢ ಸಿಪಿಐ(ಎಂ) ಪಕ್ಷಕ್ಕೆ ಭಾರಿ ಆಘಾತ ಉಂಟಾಗಿದೆ. ಪಕ್ಷದ ಹಿರಿಯ ನಾಯಕಿ ಹಾಗೂ ವರ್ಕಲಾ ವಿಭಾಗೀಯ ಸಮಿತಿ ಸದಸ್ಯೆ ಸ್ಮಿತಾ ಸುಂದರೇಶನ್ ಅಧಿಕೃತವಾಗಿ ರವಿವಾರ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ತಿರುವನಂತಪುರಂನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮತ್ತು ಕೇರಳ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಸ್ಮಿತಾ ಸುಂದರೇಶನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿರುವ ಅವರು, ಸಿಪಿಐ ಪಕ್ಷದಲ್ಲಿ ಸಿದ್ಧಾಂತಗಳಿಗಿಂತ ವೈಯಕ್ತಿಕ ಹಿತಾಸಕ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಮಿತಾ ಸುಂದರೇಶನ್ ಅವರು ಸಿಪಿಐ(ಎಂ) ಪಕ್ಷದ ಪ್ರಭಾವಿ ನಾಯಕ ಸುಂದರೇಶನ್ ಅವರ ಪುತ್ರಿ. ವರ್ಕಲಾ ಭಾಗದಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ಅವರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವರ್ಕಲಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular