Saturday, July 18, 2026
Homeಜಿಲ್ಲೆಬೆಳ್ತಂಗಡಿ : ಅಕ್ರಮವಾಗಿ ಶೇಖರಿಸಿದ 4,175 ಲೀಟರ್ ಡೀಸೆಲ್ ಪತ್ತೆ, ಪ್ರಕರಣ ದಾಖಲು.

ಬೆಳ್ತಂಗಡಿ : ಅಕ್ರಮವಾಗಿ ಶೇಖರಿಸಿದ 4,175 ಲೀಟರ್ ಡೀಸೆಲ್ ಪತ್ತೆ, ಪ್ರಕರಣ ದಾಖಲು.

ಬೆಳ್ತಂಗಡಿ : ಬೆಳ್ತಂಗಡಿ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಬ್ಯಾರಲ್ ಮತ್ತು ಕ್ಯಾನ್ ಗಳಲ್ಲಿ ಅಕ್ರಮವಾಗಿ ಡೀಸೆಲ್ ನ್ನು ಶೇಖರಿಸಿಟ್ಟ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.

ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ ಕೆ ರವರಿಗೆ ದೊರೆತ ಮಾಹಿತಿಯ ಮೇರೆಗೆ 09-03-2026 ರಂದು ರಾತ್ರಿ ಪೊಲೀಸರು ಸ್ಥಳಕ್ಕೆ ತೆರಳಿ‌ ತಪಾಸಣೆ ನಡೆಸಿದಾಗ ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್ ನಲ್ಲಿ ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್ ಗಳು ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ 05 ಕ್ಯಾನ್ ಗಳಲ್ಲಿ ಒಟ್ಟು ರೂ 3,50,000/ ಮೌಲ್ಯದ ಸುಮಾರು 4,175 ಲೀಟರ್ ಡೀಸೆಲ್ ತುಂಬಿಸಿರುವದು ಕಂಡುಬಂದಿದೆ.‌ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಯಾವುದೇ ಪರವಾನಿಗೆ ಹೊಂದದೇ ಹಾಗೂ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅಕ್ರಮವಾಗಿ ಡೀಸೆಲ್ ಶೇಖರಿಸಿಟ್ಟಿರುವುದು ತಿಳಿದುಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular