Thursday, March 5, 2026
Flats for sale
Homeವಾಣಿಜ್ಯಬೆಂಗಳೂರು : ದೇಶಾದ್ಯಂತ 3.3 ಕೋಟಿ ಬಳಕೆದಾರರಿಂದ 100 ಕೋಟಿ ರೂ. ಗಳಿಗೂ ಹೆಚ್ಚು ಹಣ...

ಬೆಂಗಳೂರು : ದೇಶಾದ್ಯಂತ 3.3 ಕೋಟಿ ಬಳಕೆದಾರರಿಂದ 100 ಕೋಟಿ ರೂ. ಗಳಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿದ ಜಾರ್ ಡಿಜಿಟಲ್ ಗೋಲ್ಡ್ ಕಂಪನಿ ತನಿಖೆಗೆ ಹೈ ಆದೇಶ.

ಬೆಂಗಳೂರು : ದೇಶಾದ್ಯAತ 3.3ಕೋಟಿ ಬಳಕೆದಾರರಿಂದ 100 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ಡಿಜಿಟಲ್ ಗೋಲ್ಡ್ ಸ್ಕೀಮ್‌ನಲ್ಲಿ ಹೂಡಿಕೆ ಮಾಡಿಸಿಕೊಂಡಿರುವ ಬೆಂಗಳೂರುಮೂಲದ ಸ್ಟಾರ್ಟಪ್ ಕಂಪನಿಯಾಗಿರುವ ಜಾರ್ ಗೋಲ್ಡ್ ವಿರುದ್ಧದ ತನಿಖೆಯನ್ನುರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅದರೊಂದಿಗೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಸೂಚನೆಯ ಮೇರೆಗೆ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಸಂಬAಧ ಕೇಂದ್ರ ಅಪರಾಧ ತನಿಖಾ ಸಂಸ್ಥೆ (ಸಿಐಡಿ) ತನಿಖೆಯನ್ನು ನಡೆಯಲಿದೆ.

ಜಾರ್ ಗೋಲ್ಡ್ ರಿಟೇಲ್’ ಪ್ರೈ . ಲಿಮಿಟೆಡ್ ಸ್ಟಾರ್ಟಪ್ ಕಂಪನಿಯು ಅನಿಯAತ್ರಿತ ಠೇವಣಿ ಯೋಜನೆಗಳ ನಿಷೇಧ (ಬಡ್ಸ್) ಕಾಯ್ದೆಯಡಿ ಪೊಲೀಸರು ತನ್ನ ವಿರುದ್ಧ ದಾಖಲಿಸಿರುವ ಸ್ವಯಂಪ್ರೇರಿತ ಪ್ರಕರಣ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿತ್ತು. ಕಂಪನಿಯ ನಿರ್ದೇಶಕರಾದನಿಶ್ಚಯ್ ಅರಕಲಗೂಡು ಮತ್ತು ಇತರರು ತಮ್ಮ ವಿರುದ್ಧದ ಪೊಲೀಸ್ ತನಿಖೆ ರದ್ದುಗೊಳಿಸುವಂತೆ ಕೋರಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ಜಾರ್ ಗೋಲ್ಡ್ ಕಂಪನಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವ ಬಗ್ಗೆಸೂಕ್ತ ತನಿಖೆ ನಡೆಸುವ ಅಗತ್ಯವಿದೆ ಎಂದು ಬುಧವಾರ ಆದೇಶ ನೀಡಿ, ಅರ್ಜಿಯನ್ನು ವಜಾಗೊಳಿಸಿದರು.

ಸುಮಾರು 3.3 ಕೋಟಿ ಬಳಕೆದಾರರನ್ನು ಜಾರ್ ಗೋಲ್ಡ್ ಸಂಸ್ಥೆಯು ಹೊAದಿದ್ದು, ಅವರು 100 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಈ ಕಂಪನಿಯ ಆ್ಯಪ್ ಮೂಲಕ ಡಿಜಿಟಲ್ ಗೋಲ್ಡ್ ಸ್ಕೀಮ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಆರ್‌ಬಿಐ, ಸೆಬಿ, ಆದಾಯ ತೆರಿಗೆ ಇಲಾಖೆ, ರಾಜ್ಯ ಕಂದಾಯಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಬಹುಶಿಸ್ತೀಯ ತಂಡ (ಎಂಡಿಟಿ) ನೀಡಿದ ಸೂಚನೆಯಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಜಾರ್ ಗೋಲ್ಡ್ ಕಂಪನಿಯು ಕಳೆದ ೫ ವರ್ಷಗಳಲ್ಲಿ ಸುಮಾರು 4,೦೦೦ ಕೋಟಿ ರೂಪಾಯಿಗಳ ವಹಿವಾಟು ನಡೆಸಿದೆ. ಕಳೆದ ಜ.16 ರಂದು ಬೆಂಗಳೂರು ಪೊಲೀಸರು ‘ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ’ ಕಾಯ್ದೆಯಡಿ ಸುಮಾರು 3.3 ಕೋಟಿ ಹೂಡಿಕೆದಾರರ ಹಿತದೃಷ್ಟಿಯಿಂದ ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿದ್ದರು. ಕಂಪನಿಯ ನಿರ್ದೇಶಕರಾದ ಮಿಸ್ಬಾ ಅಶ್ರಫ್, ಸಂದೇಶ್ ನಹಾರ್, ನಿಶ್ಚಯ್ ಬಾಬು ಅರಕಲಗೂಡು ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

ಗ್ರಾಹಕರಿಂದ ಯಾವುದೇ ದೂರುಗಳು ಬಂದಿಲ್ಲ ಮತ್ತು ಇದು ಕೇವಲ ಒಂದು ಉಳಿತಾಯ ಅಪ್ಲಿಕೇಶನ್ ಎಂದು ಕಂಪನಿ ವಾದಿಸಿತ್ತು.ಕಂಪನಿಯನಿರ್ದೇಶಕರಿಗೆ ಈಗಾಗಲೇ ಕೆಳ ನ್ಯಾಯಾಲಯದಿಂದ ಷರತ್ತುಬದ್ಧ ನಿರೀಕ್ಷಣಾ ಜಾಮೀನು ದೊರೆತಿದೆ. ಡಿಜಿಟಲ್ ಚಿನ್ನದ ಯೋಜನೆಯು ಸಾರ್ವಜನಿಕರ ಮೇಲೆ ಬೀರಬಹುದಾದ ದೊಡ್ಡ ಮಟ್ಟದ ಪರಿಣಾಮಗಳ ಬಗ್ಗೆ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಜಾರ್ ಪ್ರಕರಣದಲ್ಲಿ ಸರ್ಕಾರ ಮತ್ತು ಪೊಲೀಸರ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿಅಭಿಯೋಜಕರು, `ಇದು ಐಎಂಎ ಪ್ರಕರಣದ ರೀತಿಯಲ್ಲಿದೆ. ಆ ಪ್ರಕರಣದಲ್ಲೂ ಪೊಲೀಸರಿಗೆಆರ್‌ಬಿಐನಿಂದ ತನಿಖೆಗೆ ಸೂಚನೆ ಬಂದಿತ್ತು. ಆದರೆ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಐಎಂಗೆ ಕ್ಲೀನ್‌ಚಿಟ್ ನೀಡಿದ್ದರು. ಹೀಗಾಗಿ ಈಗ ಪೊಲೀಸರ ವಿರುದ್ಧವೇ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲೂ ಆರ್‌ಬಿಐ ಸೂಚನೆಯ ಮೇಲೇ ಪೊಲೀಸರು ಎಫ್‌ಐಆರ್ ದಾಖಲಿಸಿ ದಾಳಿ ನಡೆಸಿದ್ದಾರೆ’ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular