Sunday, February 22, 2026
Flats for sale
Homeರಾಜ್ಯಚಿಕ್ಕೋಡಿ : ಅತ್ತೆಯ ಕಾಟಕ್ಕೆ ಬೇಸತ್ತು 100 ರೂ-10 ರೂ. ನೋಟಿನ ಒಳಗಡೆ ಸಾಯಲಿ ಎಂದು...

ಚಿಕ್ಕೋಡಿ : ಅತ್ತೆಯ ಕಾಟಕ್ಕೆ ಬೇಸತ್ತು 100 ರೂ-10 ರೂ. ನೋಟಿನ ಒಳಗಡೆ ಸಾಯಲಿ ಎಂದು ದೇವರಿಗೆ ಹರಕೆ ಹೊತ್ತ ಸೊಸೆ.

ಚಿಕ್ಕೋಡಿ : ಅತ್ತೆಯ ಕಾಟಕ್ಕೆ ಬೇಸತ್ತು ಸೊಸೆ ಅಥವಾ ಅಳಿಯನಿಂದ ದೇವರಿಗೆ ವಿಚಿತ್ರ ಬೇಡಿಕೆ ಸಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ.

ದೇವರೇ ನನ್ನ ಕಷ್ಟ ದೂರ ಮಾಡು, ನಮ್ಮ ಅತ್ತೆ ಸಾಯಲಿ ಎಂದು ದೇವರಿಗೆ ಹರಕೆ ಹೊತ್ತಿದ್ದು ಖಣದಾಳ ಗ್ರಾಮದ ಶ್ರೀ ಹುಲಿಕಾಂತೇಶ್ವರ ದೇವರಿಗೆ ಅಪರಿಚಿತ ಮಹಿಳೆ ಅಥವಾ ಪುರುಷ ಹರಿಕೆ ಹೊತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮದಲ್ಲಿ 100 ರೂ ಹಾಗೂ 10 ರೂ ಮುಖಬೆಲೆಯ ನೋಟಿನ ಒಳಗಡೆ ಬಿಳಿಹಾಳೆಯ ಮೇಲೆ ಬರವಣಿಗೆ ಪತ್ತೆಯಾಗಿದ್ದು ಮುಂದಿನ ವರ್ಷದ ಜಾತ್ರೆ ಬರುವ ಮುಂಚೆ ನಮ್ಮ ಅತ್ತೆ ಸಾಯಲಿ ಎಂದು ನೋಟಿನ ಜೊತೆ ಚೀಟಿ ವ್ಯಕ್ತಿ ಅಂಟಿಸಿದ್ದಾನೆ.ಈ ಬಗ್ಗೆ ದೇವಸ್ಥಾನ ಕಮೀಟಿಯಿಂದ ಹುಂಡಿಯ ಹಣ ಎಣಿಕೆ ಸಂದರ್ಭ ಬೆಳಕಿಗೆ ಬಂದಿದ್ದು ಈ ನೋಟ ನ್ನು ಕಂಡು ದೇವಾಲಯದ ಸಿಬ್ಬಂದಿಗಳು ದಂಗಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular